ದೇವನಹಳ್ಳಿ ಬೆಸ್ಕಾಂ ಎಇಇ ಅಮಾನತಿಗೆ ಪಟ್ಟು

Untitled-1
Published on

ದೇವನಹಳ್ಳಿ : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿದ್ಯುತ್​ ಮೀಟರ್​ ಕಿತ್ತುಕೊಂಡು ಹೋಗಿ ಆರು ತಿಂಗಳು ಗ್ರಾಹಕರೊಬ್ಬರನ್ನು ಕಚೇರಿಗೆ ಅಲೆದಾಡಿಸಿದ ದೇವನಹಳ್ಳಿ ಬೆಸ್ಕಾಂ ಎಇಇಯನ್ನು ಅಮಾನತು ಮಾಡಬೇಕು ಎಂದು ಬಹುಜನಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎಂ.ನರಸಿಂಹರಾಜು ಒತ್ತಾಯಿಸಿದರು.

ದೇವನಹಳ್ಳಿಯ ರಾಣಿ ವೃತ್ತದ ಬಳಿ ಇರುವ ನೀಲೇರಿ ವೆಂಕಟಲಕ್ಷ$್ಮಮ್ಮ ಅವರು ವಿದ್ಯುತ್​ ಬಿಲ್​ ಬಾಕಿ ಸಕಾಲಕ್ಕೆ ಕಟ್ಟುತ್ತಿದ್ದರೂ ಒಂಟಿ ಮನೆಯ ವಿದ್ಯುತ್​ ಸಂಪರ್ಕ ಕಡಿತಗೊಳಿಸಿ ಮೀಟರ್​ ಕಿತ್ತುಕೊಂಡು ಹೋಗಲಾಗಿದೆ. ಈ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರಿಂದ ಎಇಇ ಬಳಿ ಈ ಬಗ್ಗೆ ಪ್ರಶ್ನಿಸಿದರೆ, ನಾವು ತೆಗೆದುಕೊಂಡು ಬಂದಿಲ್ಲ ಎಂಬ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು. ನಂತರ ವೆಂಕಟಲಕ್ಷ$್ಮಮ್ಮ ಮೀಟರ್​ ಇಲ್ಲದೇ ವಿದ್ಯುತ್​ಲೈನ್​ ಮೂಲಕ ನೇರವಾಗಿ ಸಂಪರ್ಕ ತೆಗೆದುಕೊಂಡ ಎರಡೇ ದಿನಕ್ಕೆ ಎಇಇ ಜಾಗೃತದಳದ ಅಧಿಕಾರಿಗಳಿಗೆ ದಾಳಿ ಮಾಡಿಸಿ ಕೇಸ್​ ಹಾಕಿಸಿ 16,750 ದಂಡ ರೂ. ಹಾಕಿಸಿದ್ದಾರೆ. ವಿದ್ಯುತ್​ ಸಂಪರ್ಕ ನೀಡುವುದಿಲ್ಲ, ಸೋಲಾರ್​ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ ಎಂದರು.

ಕೊನೆಗೆ ಹಲವು ಸಂಟನೆಗಳ ಮೂಲಕ ಮೇಲಧಿಕಾರಿಗಳ ಬಳಿ ದೂರು ದಾಖಲಿಸಿ ಬಿಸಿ ಮುಟ್ಟಿಸಿದಾಗ 6 ತಿಂಗಳ ನಂತರ ಅಂದರೆ 16 ದಿನಗಳ ಹಿಂದೆ ಮತ್ತೆ ಅದೇ ಜಾಗಕ್ಕೆ ಅದೇ ಮೀಟರ್​ ತಂದು ಅಳವಡಿಸಿದ್ದಾರೆ ಎಂದರು. ವೆಂಕಟಲಕ್ಷ$್ಮಮ್ಮ ಅವರ ಜಮೀನಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್​ ದೇವಾಲಯ ಮತ್ತು ವಾಸದ ಮನೆ ಇದ್ದು, ಇದು ಬೆಂಗಳೂರು&ಹೈದರಾಬಾದ್​ ಹೆದ್ದಾರಿಗೆ ಹೊಂದಿಕೊಂಡಿದೆ. ಬಹುಕೋಟಿ ಬೆಲೆಬಾಳುವ ಭೂಮಿ ಆಗಿರುವುದರಿಂದ ಭೂಮಿ ಲಪಟಾಯಿಸಲು ಭೂಮಾಫಿಯಾದವರು ತಂತ್ರ ರೂಪಿಸುತ್ತಿದ್ದಾರೆ ಎಂದು ಆಪಾದಿಸಿದರು. ಗ್ರಾಹಕರಿಗೆ ಅನಗತ್ಯ ತೊಂದರೆ ನೀಡುವ ಎಇಇ ಅಮಾನತುಗೊಳಿಸಿ ಇಲಾಖಾ ತನಿಖೆ ಮಾಡಬೇಕು ಎಂದು ಬಿಎಸ್​ಪಿ ರಾಜ್ಯ ಕಾರ್ಯದರ್ಶಿ ಬಂಗಾರಪ್ಪ ಆಗ್ರಹಿಸಿದರು. ತಾಲೂಕು ಉಪಾಧ್ಯಕ್ಷ ಜೊನ್ನಹಳ್ಳಿ ಮುನಿರಾಜು, ನೀಲೇರಿ ನಾರಾಯಣಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕೋರಮಂಗಲ ನರಸಿಂಹಮೂರ್ತಿ, ತಾಲೂಕು ಖಜಾಂಚಿ ನಾಗಮಣಿ, ಯುವ ಟಕದ ತಾಲುಕು ಅದ್ಯಕ್ಷ ಚಂದ್ರು, ಪದಾಧಿಕಾರಿಗಳಾದ ಗಂಗಾಧರ್​, ಕುಂಬಾರ ಸಂದ ಎಂ.ನಂಜುಂಡಯ್ಯ ಇದ್ದರು.

ವೆಂಕಟಲಕ್ಷ್ಮಮ್ಮ ನಾರಾಯಣಪ್ಪ ಎಂಬುವರು ಮನೆಯ ಮೀಟರ್​ ಎಲ್ಲಿ ಎಂದು ಕೇಳಿದ್ದರು. ನನಗೆ ಗೊತ್ತಿಲ್ಲ ಎಂದಿದ್ದು ಸತ್ಯ. ಆದರೆ, ಅದನ್ನು ಜಾಗೃತ ದಳದವರು ತೆಗೆದುಕೊಂಡು ಹೋಗಿದ್ದಾರೆ ಎಂದು ಭಾವಿಸಿದ್ದೆ. ನಮ್ಮ ಮೀಟರ್​ ರೀಡರ್​ ವಿಚಾರಿಸಿದಾಗ ಅವರು ಮೀಟರ್​ ಅನ್ನು ಯಾರಿಗೂ ಹೇಳದೇ ತೆಗೆದುಕೊಂಡು ಬಂದಿರುವುದು ತಿಳಿಯಿತು. ಸ್ವಲ್ಪದಿನ ತಡವಾದರೂ ಮೀಟರ್​ ಇದ್ದ ಜಾಗದಲ್ಲಿ ಮತ್ತೆ ಮೀಟರ್​ ಅಳವಡಿಸಲಾಗಿದೆ. ಇಲ್ಲಿ ಮೀಟರ್​ ರೀಡರ್​ ಲೋಪವಾಗಿದೆ. ನಮ್ಮ ಪಾತ್ರವೇನೂ ಇಲ್ಲ. > ಬಿ.ಎಂ. ಲ್ಮಕಾಂತ್​ ಬೆಸ್ಕಾಂ ಎಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net