ಇನ್ಶೂರೆನ್ಸ್ ತುಂಬದ ಕಾರಣ ದೇವಳಮಕ್ಕಿ ಆಂಬುಲೆನ್ಸ್ ಸೇವೆ ಸ್ಥಗಿತ

15KWR AMBULANCE
Published on

ಕಾರವಾರ: ಇನ್ಶೂರೆನ್ಸ್ ತುಂಬದ ಕಾರಣ ತಾಲೂಕಿನ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಸೇವೆ ಸ್ಥಗಿತವಾಗಿದೆ.

2021ರಲ್ಲಿ ಕರೊನಾ ಸಂದರ್ಭದಲ್ಲಿ ಆಗಿನ ಶಾಸಕಿ ರೂಪಾಲಿ ನಾಯ್ಕ ಪ್ರದೇಶಾಭಿವೃದ್ಧಿ ನಿಧಿಯಿಂದ ಕಾರವಾರ ತಾಲೂಕಿಗೆ ಎರಡು ಸುಸಜ್ಜಿತ ಆಂಬುಲೆನ್ಸ್ ಖರೀದಿಸಲಾಗಿತ್ತು.

ಶಾಸಕಿ ಆರೋಗ್ಯ ಇಲಾಖೆಗೆ ಆಂಬುಲೆನ್ಸ್ ಹಸ್ತಾಂತರಿಸಿದ್ದರು. ಕಾಳಿ ನದಿಯ ಎಡ ದಂಡೆಯ ಗ್ರಾಮಗಳಲ್ಲಿ ಸಮರ್ಪಕ ಆರೋಗ್ಯ ಸೇವೆ ಇಲ್ಲದ ಕಾರಣ ಅಲ್ಲಿನ ಜನರಿಗೆ ಅನುಕೂಲವಾಗಲಿ ಎಂದು ದೇವಳಮಕ್ಕಿಯಲ್ಲಿ ಆಂಬುಲೆನ್ಸ್ ಇರಿಸಲಾಗಿತ್ತು.

ಆಂಬುಲೆನ್ಸ್​ನಿಂದ ಸ್ಥಳೀಯರಿಗೆ ಸಾಕಷ್ಟು ಅನುಕೂಲವಾಗಿತ್ತು. ತುರ್ತು ಹೆರಿಗೆ, ಅಪಘಾತ, ಅಥವಾ ಅನಾರೋಗ್ಯ ಸಮಯದಲ್ಲಿ ತುರ್ತಾಗಿ ಕಾರವಾರ ಆಸ್ಪತ್ರೆಗೆ ಕರೆತರಲು ಅನುಕೂಲವಾಗುತ್ತಿತ್ತು. ಆದರೆ, ಕೆಲ ದಿನಗಳಿಂದ ಆಂಬುಲೆನ್ಸ್ ಓಡಾಡುತ್ತಿಲ್ಲ. ಹೆರಿಗೆ ನೋವಿನಿಂದ ಬಳಲುತ್ತಿರುವ ಕೆಲವರನ್ನು ಕರೆದೊಯ್ಯಲು ಮನವಿ ಮಾಡಿದಾಗ ಆಂಬುಲೆನ್ಸ್​ಗೆ ಇನ್ಶೂರೆನ್ಸ್ ತುಂಬಿಲ್ಲ ಎಂಬ ಉತ್ತರ ಆಸ್ಪತ್ರೆ ಸಿಬ್ಬಂದಿಯಿಂದ ಕೇಳಿ ಬಂದಿದೆ.

‘ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿರುವ ಡಿಎಚ್​ಒ ಡಾ. ನೀರಜ್ ವಿ.ವಿ., ಈ ಕುರಿತು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net