ದೇವಳಮಕ್ಕಿ ಸೊಸೈಟಿ ನಿರ್ದೇಶಕರ ಆಯ್ಕೆ

Devalamakki-Sosity-News
Published on

ಕಾರವಾರ:ತಾಲೂಕಿನ ದೇವಳಮಕ್ಕಿ ಸೇವಾ ಸಹಕಾರಿ ಸಂಘ (ಸೊಸೈಟಿ) ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಭಾನುವಾರ ನಡೆಯಿತು.

ಈ ಚುನಾವಣೆಯಲ್ಲಿ 5 ವರ್ವಗಳ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗುವವರು ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.

ಸಾಲಗಾರ ಸಾಮಾನ್ಯ ಮತದಾರ ಕ್ಷೇತ್ರದಿಂದ ಶ್ರೀಪಾದ ರಾಮಚಂದ್ರ ಭಟ್ಟ, ಚಂದ್ರಕಾಂತ ಲೇಖಾ ಗೌಡ,ಗೋಪಾಲ ಸೋಮಾ ಗೌಡ, ವಿಜೇಂದ್ರ ದೇವಿದಾಸ ಬೇಳೂರಕರ, ಶಾಂತರಾಮ ಶಂಕರ ಗುನಗಿ, ಸಾಲಗಾರ ಮಹಿಳಾ ಮೀಸಲು ಮತದಾರ ಕ್ಷೇತ್ರದಿಂದ ಗುಲಾಬಿ ಜಯವಂತ ಗುನಗಿ, ವನೀತಾ ಸೈರು ಆಚಾರಿ, ಸಾಲಗಾರ ಹಿಂದುಳಿದ 'ಅ' ವರ್ಗ ಮೀಸಲು ಮತದಾರ ಕ್ಷೇತ್ರದಿಂದ ಗಣಪತಿ ಸುಕ್ರು ಗೌಡ, ಸಾಲಗಾರ ಹಿಂದುಳಿದ 'ಬ' ವರ್ಗ ಮೀಸಲು ಮತದಾರ ಕ್ಷೇತ್ರದಿಂದ ಲೀನಾ ಸಾಲು ಪೆರೆರಾ, ಸಾಲಗಾರರಲ್ಲದ ಮತದಾರ ಕ್ಷೇತ್ರದಿಂದ ಸುಧೀರ್ ಗಜಾನನ ನಾಯ್ಕ ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಕುಷ್ಠ ವಾಘು ಹುಲಸ್ವಾರ, ಶ್ಯಾಮ ಸುಂಕಪ್ಪ ವಾಲ್ಮೀಕಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net