ದೇವಲ ಮಹರ್ಷಿಗಳ ಕೊಡುಗೆ ಅನನ್ಯ

TVG 01
ತಾವರಗೇರಾದಲ್ಲಿ ನಡೆದ ದೇವಾಂಗ ಮಹರ್ಷಿಗಳ ಜಿಲ್ಲಾ ಮಟ್ಟದ ಜಯಂತಿ ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ದಯಾನಂದ ಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಶಾಸಕ ದೊಡ್ಡನಗೌಡ ಪಾಟೀಲ ಕೊರಡಕೇರಿ, ಸಾಹಿತಿ ಜಿ.ಪವನಕುಮಾರ ಗಂಗಾವತಿ, ಮಾಜಿ ಶಾಸಕರಾದ ಹಸನಸಾಬ ದೋಟಿಹಾಳ, ಅಮರೇಗೌಡ ಪಾಟೀಲ, ಜಿ.ಪಂ.ಮಾಜಿ ಸದಸ್ಯ ಕೆ.ಮಹೇಶ, ದೇವಾಂಗ ಸಮುದಾಯದ ಜಿಲ್ಲಾಧ್ಯಕ್ಷ ಸಿ.ಎಸ್.ಚನ್ನಿ, ಶಂಕ್ರಪ್ಪ ಸಿನ್ನೂರ ಇದ್ದರು.
Published on

ತಾವರಗೇರಾ: ದೇವಾನುದೇವತೆಗಳಿಗೆ ವಸ್ತ್ರ ನೀಡಿದವರು ಹಾಗೂ ಮನುಕುಲದ ಮಾನ ಕಾಪಾಡಿದವರು ಶ್ರೀ ದೇವಲ ಮಹರ್ಷಿಗಳು,
ಮನುಷ್ಯ ಸತ್ತಗ ಅವನ ಮೇಲೆ ಬಟ್ಟೆ ಮಾತ್ರ ಇರುತ್ತದೆ, ಅದಕ್ಕೆ ಕಾರಣ ನೇಕಾರರು ಇವರ ಋಣ ತೀರಿಸಲಾಗದು ಎಂದು ಶಾಸಕ ದೊಡ್ಡನಗೌಡ ಪಾಟೀಲ ಕೊರಡಕೇರಿ ಹೇಳಿದರು.

ಪಟ್ಟಣದ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಕೊಪ್ಪಳ ಜಿಲ್ಲಾ ದೇವಾಂಗ ಕ್ಷೇಮಾಭಿವೃದ್ಧಿ ಸಂಘ, ನೌಕರರ ಸಂಘ, ಸ್ಥಳೀಯ ಹಾಗೂ ತಾಲೂಕು ದೇವಾಂಗ ಅಭಿವೃದ್ಧಿ ಸೇವಾ ಸಂಘದವರ ಸಹಯೋಗದಲ್ಲಿ ಆಯೋಜಿಸಿದ್ದ ದೇವಲ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಈ ಸಮಾಜದವರು ಅರ್ಥಿಕವಾಗಿ ಹಿಂದುಳಿದರೂ ಶೈಕ್ಷಣಿಕವಾಗಿ ಬಹಳ ಬುದ್ದಿವಂತರು. ಮುಂದಿನ ದಿನಮಾನಗಳಲ್ಲಿ ಸಮಾಜದ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡುತ್ತೇನೆ ಎಂದರು.

ಹಂಪಿ ಹೇಮಕೂಟದ ದೇವಾಂಗ ಪೀಠದ ಜಗದ್ಗುರು ದಯಾನಂದಪುರಿ ಮಹಾಸ್ವಾಮಿ ಮಾತನಾಡಿ, ದೇವಾಂಗ ಸಮುದಾಯ, ಸಮಾಜದಲ್ಲಿ ಮುಂದೆ ಬರಬೇಕಿದೆ. ಹೆಚ್ಚಿನ ಪ್ರತಿಭೆಗಳು ಶೈಕ್ಷಣಿಕ ರಂಗದಲ್ಲಿ ಸಾಧನೆಗೈಯಬೇಕು. ಉನ್ನತ ಮಟ್ಟದ ನೌಕರಿ ಪಡೆಯಲು ಶ್ರಮಿಸಬೇಕು ಎಂದರು.

ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಸಂಗಡಿಗರು, ಹಾಸ್ಯ, ಸಂಗೀತ, ಗೀತೆಗಳನ್ನು ಹಾಡಿ ರಂಜಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಗೈದ ಸಮುದಾಯದ ವ್ಯಕ್ತಿಗಳಿಗೆ ಸನ್ಮಾನ ಮಾಡಲಾಯಿತು.

ಸಾಹಿತಿ ಜಿ.ಪವನಕುಮಾರ ಗಂಗಾವತಿ, ಮಾಜಿ ಶಾಸಕರಾದ ಹಸನಸಾಬ ದೋಟಿಹಾಳ, ಅಮರೇಗೌಡ ಪಾಟೀಲ, ಜಿ.ಪಂ.ಮಾಜಿ ಸದಸ್ಯ ಕೆ.ಮಹೇಶ, ದೇವಾಂಗ ಸಮುದಾಯದ ಜಿಲ್ಲಾಧ್ಯಕ್ಷ ಸಿ.ಎಸ್.ಚನ್ನಿ, ಶಂಕ್ರಪ್ಪ ಸಿನ್ನೂರ, ವಾಸು ಗಂಗಾವತಿ, ರಾಮನಗೌಡ ದೋಟಿಹಾಳ, ಸ್ಥಳೀಯ ಮುಖಂಡರಾದ ಪ್ರಹಲ್ಲಾದಗೌಡ ಮೆದಿಕೇರಿ, ಹನಮೇಶ ಕೊಂಕಲ, ಅಮರೇಶಪ್ಪ ಕೊಪ್ಪರದ, ಶಿಕ್ಷಕ ಶ್ರೀನಿವಾಸ ಸಕ್ರಿ, ಅಕ್ಷತಾ, ಸವಿತಾ ಕೊಂಡಕುಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net