ದೇವಲ ಮಹರ್ಷಿ ಜಯಂತ್ಯುತ್ಸವ 24ರಂದು

IMG_20231121_213047_883.jpg
Published on

ಹುಬ್ಬಳ್ಳಿ: ಇಲ್ಲಿಯ ನೇಕಾರನಗರದ ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್ ವತಿಯಿಂದ ಹಳೇಹುಬ್ಬಳ್ಳಿಯಲ್ಲಿ ದೇವಲ ಮಹರ್ಷಿ ಜಯಂತ್ಯುತ್ಸವವನ್ನು ನ. 24ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 9.30ಕ್ಕೆ ನೇಕಾರನಗರ ಬನಶಂಕರಿ ದೇವಸ್ಥಾನದಿಂದ ದೇವಲ ಮಹಷಿರ್ ಅವರ ಭಾವಚಿತ್ರ ಮೆರವಣಿಗೆ, ದೇವಿಯ ಪಲ್ಲಕ್ಕಿ ಉತ್ಸವವು ಹೊರಡಲಿದೆ. ನೇಕಾರನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮಧ್ಯಾಹ್ನ ದೇವಸ್ಥಾನ ತಲುಪಲಿದೆ. ಮಹಾಮಂಗಳಾರತಿ ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 8.30ಕ್ಕೆ ದೇವಸ್ಥಾನದಲ್ಲಿ ಕಾತಿರ್ಕೋತ್ಸವ ಆಯೋಜಿಸಲಾಗಿದೆ.

ಮಾನವರು, ದಾನವರು, ದೇವತೆಗಳಿಗೆ ಬಟ್ಟೆ ನಿಮಿರ್ಸಿಕೊಡುವ ಉದ್ದೇಶಕ್ಕಾಗಿ ಶಂಕರನ ಚಕ್ಸುವಿನಿಂದ ಉದ್ಭವಿಸಿದ ದೇವಿ ಪುರುಷರು, ಇವರು 7 ಅವತಾರಗಳಲ್ಲಿ ಪಾತ್ರ ನಿರ್ವಹಿಸಿರುವರು.

ಮೊದಲನೆಯವರೇ ಶ್ರೀ ದೇವಲ ಮಹಷಿರ್. 7ನೇ ಅವತಾರದಲ್ಲಿ ಶ್ರೀ ದೇವರ ದಾಸಿಮಯಯ್ಯನಾಗಿ ಇತಿಹಾಸ ಪುರುಷರಾಗಿ ಬಾಳಿದ್ದಾರೆ. ಇಂತಹ ಮಹಾತ್ಮರ ಜೀವನ ಚರಿತ್ರೆ ಮುಂದಿನ ಜನಾಂಗಕ್ಕೆ ತಿಳಿಸುವುದಕ್ಕಾಗಿ ಮಹಷಿರ್ಯವರ ಭಾವಚಿತ್ರ ಮೆರವಣಿಗೆ, ವಿವಿಧ ಧಾಮಿರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಟ್ರಸ್ಟ್ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net