ಇಬ್ಬರು ಶಿಕ್ಷಕಿಯರಿಗೆ ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ : ಎಂ.ಬಿ.ಸದಾಶಿವ ಮಾಹಿತಿ

1-award
Published on

ಸುಳ್ಯ: ಎಂ.ಬಿ.ಫೌಂಡೇಷನ್ ವತಿಯಿಂದ ನೀಡುವ ಪ್ರಥಮ ವರ್ಷದ ‘ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್’ಗೆ ಸುಳ್ಯ ಕೋಲ್ಚಾರು ಶಾಲಾ ಶಿಕ್ಷಕಿ ಜಲಜಾಕ್ಷಿ ಕುಕ್ಕುಜೆ ಹಾಗೂ ಸೈಂಟ್ ಬ್ರಿಜಿನ್ಸ್ ಶಾಲೆಯ ಶಿಕ್ಷಕಿ ಕೆ.ಟಿ.ವಲ್ಸ ಆಯ್ಕೆಯಾಗಿದ್ದಾರೆ ಎಂದು ಫೌಂಡೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ ಸುಳ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಂದೆ ಎಂ.ಬಾಲಕೃಷ್ಣ ಗೌಡ ಹಾಗೂ ತಾಯಿ ದೇವಕಿ ಅವರ ಸ್ಮರಣಾರ್ಥ ಪ್ರತಿ ವರ್ಷ ಒಂದು ಸರ್ಕಾರಿ ಹಾಗೂ ಖಾಸಗಿ ಶಾಲೆಯ ಓರ್ವ ಶಿಕ್ಷಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ ನಗದು ಹಾಗೂ ಫಲಕ ಒಳಗೊಂಡಿದೆ. ಆಯ್ಕೆ ಸಮಿತಿ ರಚಿಸಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಫೌಂಡೇಷನ್ ಸಲಹೆಗಾರರಾದ ನೇತ್ರಾವತಿ ಪಡ್ಡಂಬೈಲು, ರಾಧಾಕೃಷ್ಣ ಮಾಣಿಬೆಟ್ಟು, ಖಜಾಂಚಿ ಪುಷ್ಪಾವತಿ ರಾಧಾಕೃಷ್ಣ, ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net