ವಾರಬಂದಿ ಜಾರಿಯ ಮಾಹಿತಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಒತ್ತಾಯ

Prabhakar Patil I Raichur
ಪ್ರಭಾಕರ್ ಪಾಟೀಲ್ ಇಂಗಳದಾಳ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ. ರಾಯಚೂರು.
Published on

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ 6 ದಿನ ನೀರು ಸರಬರಾಜು ಸ್ಥಗಿತಗೊಳಿಸಿ 14 ದಿನ ಹರಿಸಬೇಕು. ಈ ಕುರಿತು ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೀರಿನ ಕೊರತೆ ತಪ್ಪಿಸಲು ವಾರಬಂದಿಗೆ ರೈತರ ಸಹಮತವಿದೆ. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ಏಪಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ರೈತರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಕೆಳ ಹಂತದ ಅಧಿಕಾರಿಗಳ ಸಲಹೆ ಪಡೆಯುತ್ತಿಲ್ಲ. ಇದರಿಂದಾಗಿ ನಾಲೆ ಕೊನೆಯ ಭಾಗದಲ್ಲಿ ಬೆಳೆದಿರುವ ಭತ್ತ ಹಾಗೂ ಮೆಣಸಿನಕಾಯಿ ಫಸಲಿಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.

ನ.19ರಂದು ನಡೆಯಬೇಕಿದ್ದ ಐಸಿಸಿ ಸಭೆ ಯಾವುದೇ ಕಾರಣ ನೀಡದೆ ರದ್ದುಪಡಿಸಿ, ನ.23ರಕ್ಕೆ ಮುಂದೂಡಿದ್ದಾರೆ. ಇದು ರೈತರಲ್ಲಿ ಗೊಂದಲ ಮೂಡಿಸಿದೆ. ನೀರು ಹರಿಸುವ ಮುನ್ನ ಹತ್ತಿ, ತೊಗರಿ, ಭತ್ತದ ಬೆಳೆಗೆ ಎಷ್ಟು ದಿನ ನೀರು ಬೇಕು ಎನ್ನುವ ಕುರಿತು ಕೃಷಿ ಇಲಾಖೆ, ಮೆಣಸಿನಕಾಯಿಗೆ ಎಷ್ಟು ದಿನ ನೀರು ಬೇಕು ಎನ್ನುವ ಕುರಿತು ತೋಟಗಾರಿಕೆ ಇಲಾಖೆ ಬಳಿ ಮಾಹಿತಿ ಪಡೆಯಬೇಕು. ಅಲ್ಲದೆ ರೈತರಿಂದ ಅಭಿಪ್ರಾಯ ಸಂಗ್ರಹಿಸಬೇಕು. ಆದರೆ, ಅಧಿಕಾರಿಗಳು ಇದ್ಯಾವುದನ್ನೂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net