

ಎಂ.ಎ. ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ದೇವದುರ್ಗ: ಪ್ರಪಂಚದಲ್ಲಿ ಭಾಷೆಗಾಗಿ ಇರುವ ಏಕೈಕ ಪ್ರಥಮ ವಿಶ್ವವಿದ್ಯಾಲಯ ಎಂದು ಅದು ಕನ್ನಡ ವಿಶ್ವವಿದ್ಯಾಲಯ ಎಂದು ವಿವಿ ಆಡಳಿತ ಮಂಡಳಿ ಸದಸ್ಯ ಬಸವರಾಜ ಕೊಪ್ಪರ ಹೇಳಿದರು.
ಪಟ್ಟಣದ ಹಂಪಿ ಕನ್ನಡ ವಿವಿ ವಿಸ್ತರಣಾ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಎಂ.ಎ. ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯ ಕನ್ನಡದ ಬದುಕಿನ ವಿವೇಕದಂತೆ ಕೆಲಸ ಮಾಡುತ್ತಿದೆ. ಸುಮಾರು 700ಎಕರೆ ವಿಸ್ತಾರ ಪ್ರದೇಶದಲ್ಲಿ ತ್ರಿಪದಿ, ಕೂಡಲಸಂಗಮ, ಕವಿರಾಜಮಾರ್ಗ, ಕ್ರಿಯಾಶಕ್ತಿ, ಭುವನವಿಜಯ, ತುಂಗಭದ್ರಾ, ಅನನ್ಯ, ಅಸ್ಮಿತ, ಅಕ್ಷರ ಗ್ರಂಥಾಲಯ ಮೊದಲಾದ ಹೆಸರುಗಳನ್ನು ಭವ್ಯ ಕಟ್ಟಡಗಳಿಗೆ ಇಡಲಾಗಿದೆ. ಈ ಮೂಲಕ ಮರೆತು ಹೋಗಬಹುದಾಗಿದ್ದ ನಮ್ಮ ದೇಸಿ ಹೆಸರು ಕಟ್ಟಡಗಳಿಗೆ ಇಟ್ಟು ಯುವಕರ ಭಾವಕೋಶದಲ್ಲಿ ಉಳಿಯುವಂತೆ ಮಾಡಿದೆ ಎಂದರು.
ಹಿಂದೆ ವಿದ್ಯಾನಗರವಾಗಿದ್ದ ಈ ಪ್ರದೇಶ ನಂತರ ಸಾಮಾಜ್ರ್ಯ ವಿಸ್ತಾರದಿಂದ ವಿಜಯನಗರವಾಗಿತ್ತು. ಈಗ ವಿದ್ಯಾರಣ್ಯವಾಗಿದೆ. ಈ ಭಾಗದ ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಹಾಗೂ ಹಿಂದುಳಿಯುವಿಕೆ ಕಾರಣಗಳನ್ನು ಗುರುತಿಸುವ ನೆಲೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ತೊಡಗಿಸಿಕೊಳ್ಳವ ಮಹತ್ವದ ಆಶಯ ಹೊಂದಬೇಕು ಎಂದರು.
ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಶಾಂತಪ್ಪ ಡಂಬಳಿ, ಆಡಳಿತ ಮಂಡಳಿ ಸದಸ್ಯರಾದ ನಾಗರಾಜ್ ಅಕ್ಕರಕಿ, ಶರಣಗೌಡ ಸುಂಕೇಶ್ವರಾಳ, ಉಪನ್ಯಾಸಕರಾದ ಡಾ.ಗೋವರ್ಧನ, ಗೀತಾ, ತಾಯಪ್ಪ, ಡಾ.ಸುಭಾಷ್ ಚಂದ್ರ ಪಾಟೀಲ್ ಇತರರಿದ್ದರು.