ವಿಹಾರಗಳ ಮೂಲಕ ಬುದ್ಧನ ಸಂದೇಶ

110122 Pahangi of Buddha Vihara construction site in Devadurga
ದೇವದುರ್ಗದಲ್ಲಿ ಬುದ್ಧ ವಿಹಾರ ನಿರ್ಮಾಣ ಸ್ಥಳದ ಪಹಣಿಯನ್ನು ಬುದ್ಧನ ಅನುಯಾಯಿಗಳಿಗೆ ಶಾಸಕ ಕೆ.ಶಿವನಗೌಡ ನಾಯಕ ಸೋವವಾರ ಹಸ್ತಾಂತರಿಸಿದರು.
Published on

ದೇವದುರ್ಗ: ಬುದ್ಧನ ತತ್ವ ಹಾಗೂ ಸಂದೇಶಗಳನ್ನು ಸಾರಲು ವಿಹಾರಗಳ ಅಗತ್ಯವಿದೆ. ಮುಂದಿನ ಪೀಳಿಗೆಗೆ ಬುದ್ಧನ ವಿಚಾರಗಳನ್ನು ತಲುಪಿಸಬೇಕಿದೆ. ಈ ಹಿನ್ನೆಲೆ ತಾಲೂಕಿನಲ್ಲಿ ಮಾದರಿ ಬುದ್ಧ ವಿಹಾರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಪಟ್ಟಣದಲ್ಲಿ ಬುದ್ಧ ವಿಹಾರ ನಿರ್ಮಿಸಲು ಗುರುತಿಸಿರುವ ನಿವೇಶನದ ಪಹಣಿ ಪತ್ರವನ್ನು ಬುದ್ಧನ ಅನುಯಾಯಿಗಳಿಗೆ ಸೋಮವಾರ ಹಸ್ತಾಂತರಿಸಿ ಮಾತನಾಡಿದರು. ಅತ್ಯುತ್ತಮ, ಸುಂದರ ಹಾಗೂ ಮಾದರಿ ಬುದ್ಧ ವಿಹಾರ ನಿರ್ಮಿಸಲು ಶಂಕರಬಂಡಿ ಕ್ರಾಸ್ ಬಳಿ ನಾಲ್ಕು ಎಕರೆ ಜಮೀನು ನಿಗದಿಪಡಿಸಲಾಗಿದೆ. ಎಲ್ಲರ ಸಹಕಾರದಿಂದ ಆಧ್ಯಾತ್ಮಿಕ ಹಾಗೂ ಪ್ರೇಕ್ಷಣಿಯ ಸ್ಥಳವನ್ನಾಗಿ ತಾಲೂಕು ರೂಪಿಸೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net