ಈಜಲುಹೋದ ಬಾಲಕ ನಾಪತ್ತೆ, ವೀರಗೋಟ ಗ್ರಾಮದ ಕೃಷ್ಣಾನದಿಯಲ್ಲಿ ಘಟನೆ

10032021 Devadurga boy missing
Published on

ದೇವದುರ್ಗ: ಸ್ನೇಹಿತರೊಡನೆ ಕೃಷ್ಣಾ ನದಿಯಲ್ಲಿ ಈಜಲು ಹೋದ ಬಾಲಕ ಬುಧವಾರ ನೀರಿನ ಸೆಳೆತಕ್ಕೆ ಸಿಕ್ಕು ನಾಪತ್ತೆಯಾಗಿದ್ದಾನೆ.

12 ವರ್ಷದ ರಂಗನಾಥ ತಾಲೂಕಿನ ವೀರಗೋಟ ಗ್ರಾಮದ ಕೃಷ್ಣಾ ನದಿಯಲ್ಲಿ ಕಾಣೆಯಾದ ಬಾಲಕ. ವಿಷಯ ತಿಳಿದ ಪೊಲೀಸರು, ಅಗ್ನಿ ಶಾಮದ ದಳದ ಸಿಬ್ಬಂದಿ, ಸ್ಥಳೀಯ ಈಜು ಪರಿಣಿತ ಮೀನುಗಾರ ತಂಡ ಬಾಲಕನ ಶೋಧ ನಡೆಸುತ್ತಿದ್ದಾರೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?: ಪಟ್ಟಣದ ನಿವಾಸಿಯೊಬ್ಬರ ಮಗನಾಗಿದ್ದ ರಂಗನಾಥ ವೀರಗೋಟದ ಶ್ರೀ ದ್ಯಾವಮ್ಮ ದೇವಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ತೆರಳಿದ್ದ. ಬುಧವಾರ ಬೆಳಗ್ಗೆ ಸಮೀಪದ ಕೃಷ್ಣಾ ನದಿಯಲ್ಲಿ ಈಜಲು ತಿಮ್ಮರೆಡ್ಡಿ, ಆಂಜನೇಯ, ಮಾನಪ್ಪ, ರಂಗಪ್ಪ ಮತ್ತು ಸಿದ್ದಣ್ಣ ಅವರ ಜತೆ ತೆರಳಿದ್ದ. ಈ ವೇಳೆ ಆಂಜನೇಯ ಮತ್ತು ರಂಗನಾಥ ಸಾಬೂನು ತರಲೆಂದು ದಂಡೆಗೆ ಬಂದಿದ್ದಾರೆ. ರಂಗನಾಥ ಮತ್ತು ಆಂಜನೇಯ ಈಜುತ್ತ ತುಸು ಮುಂದೆ ಸಾಗಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕು ರಂಗನಾಥ ಕೊಚ್ಚಿ ಹೋಗಿದ್ದು, ಇನ್ನೊಬ್ಬ ಬಾಲಕ ಆಂಜನೇಯನನ್ನು ಹತ್ತಿರದಲ್ಲೇ ಇದ್ದ ಯುವಕ ಸಿದ್ದಣ್ಣ ರಕ್ಷಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net