ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡುಗೆ ಅಪಾರ; ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಅಳ್ಳುಂಡಿ ಅಭಿಮತ

02072022 devadurga halakatti jayanti
Published on


ವಚನ ಪಿತಾಮಹಾನ ಜಯಂತಿ

ದೇವದುರ್ಗ: ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ವಚನ ಸಾಹಿತ್ಯ ಬದುಕಿಗೆ ದಾರಿದೀಪವಾಗಿದೆ. ಶರಣರು ತಮ್ಮ ಅನುಭವಗಳನ್ನು ವಚನ ರೂಪದಲ್ಲಿ ಜನರಿಗೆ ಬದುಕಿನ ದಾರಿದೀಪ ತೋರಿದ್ದಾರೆ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ವಚನದಲ್ಲಿ ಪರಿಹಾರವಿದೆ. ವಚನಗಳನ್ನು ತಿಳಿಯುವ, ಅದರ ಪ್ರಕಾರ ನಡೆಯುವ ಮನಸ್ಥಿತಿ ನಮ್ಮಲ್ಲಿ ಬೇಕಾಗಿದೆ ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಸಿಬ್ಬಂದಿ ಗೋವಿಂದ ನಾಯಕ್, ಅನಿಲ್ ಕುಮಾರ್, ಅಮರೇಶ್ ರಾಥೋಡ್, ರವಿಕುಮಾರ್ ಬಲ್ಲಿದವ್, ಹರೀಶ್, ಆದಿಕಮಲಮ್ಮ, ವಿಜಯಲಕ್ಷ್ಮೀ ಚಂದ್ರಶೇಖರ, ಭಾರತಿ ಗುರುಲಿಂಗಯ್ಯ, ಪ್ರಮೋದ್ ಕುಮಾರ್, ಎಚ್.ಶಿವರಾಜ್, ಮರಿಯಪ್ಪ ರಾಯಚೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net