ಯುವಾ ಬ್ರಿಗೇಡ್ ಟ್ಯಾಬ್ ವಿತರಣೆ

01112021 Devadurga Tab Distrubation
Published on

ದೇವದುರ್ಗ: ಸರ್ಕಾರಿ ಶಾಲೆಗಳನ್ನು ಡಿಜಿಟಲೀಕರಣ ಮಾಡುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಯುವಾ ಬ್ರಿಗೇಡ್ ಸಂಘಟನೆ ಆಯೋಜಿಸಿರುವ ‘ಕೈಹಿಡಿದು ನಡೆಸೆನ್ನನು’ ಕಾರ್ಯಕ್ರಮದಡಿ ಗಬ್ಬೂರು ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ಟ್ಯಾಬ್ ವಿತರಿಸಲಾಯಿತು.

ಮುಖ್ಯಶಿಕ್ಷಕ ಹೊನ್ನಕೇರಪ್ಪ ಮಾತನಾಡಿ, ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಂಘಟನೆಗಳು ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ. ಯುವಾ ಬ್ರಿಗೇಡ್ ಸಂಘಟನೆ ನಮ್ಮ ಶಾಲೆಯ 30 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿರುವುದು ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ. ಯುವಕರಲ್ಲಿ ಯುವಾ ಬ್ರಿಗೇಡ್ ಜಾಗೃತಿ ಮೂಡಿಸಿ ಸ್ವಚ್ಛತೆ ಕೈಗೊಳ್ಳುತ್ತಿರುವುದು ಪ್ರೇರಣೆದಾಯಕ ಎಂದರು.

ಈ ಕಾರ್ಯಕ್ರಮದಡಿ ರಾಜ್ಯಾದ್ಯಂತ 50 ಸರ್ಕಾರಿ ಶಾಲೆಗಳಿಗೆ ಟ್ಯಾಬ್ ವಿತರಣೆ ಮಾಡಿ, ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ನ.1ರಂದು ಶಿಕ್ಷಣ ಸಚಿವ ನಾಗೇಶ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅದರಲ್ಲಿ ಗಬ್ಬೂರು ಶಾಲೆ ಆಯ್ಕೆಯಾಗಿದ್ದು, ಇಲ್ಲಿನ 30 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಗಿದೆ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಉದಯಕುಮಾರ ಹೇಳಿದರು.

ಪ್ರಮುಖರಾದ ಗಬ್ಬೂರು ಹೋಬಳಿಯ ಸಂಚಾಲಕ ಚನ್ನಬಸವ ಚಿಕ್ಕಮಠ, ವೀರೇಶ, ನಾಗೇಂದ್ರ, ಭೀಮರೆಡ್ಡಿ, ಸುರೇಶ, ದೇವರಾಜ, ಜಿಂದಾವಲಿ, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net