

ದೇವದುರ್ಗ: ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಬ್ಯಾಂಕ್ ನೌಕರರ ಸಂಘ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ತಾಲೂಕಿನ ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಪಟ್ಟಣದ ಜೆಪಿ ಸರ್ಕಲ್‌ನಲ್ಲಿರುವ ಎಸ್‌ಬಿಐ ಶಾಖೆ, ಮಿನಿವಿಧಾನಸೌಧ ಸಮೀಪದ ಎಸ್‌ಬಿಐ ಶಾಖೆ, ಜಾಲಹಳ್ಳಿ, ಗಬ್ಬೂರು, ರಾಮದುರ್ಗ, ಅರಕೇರಾ, ಕೆ.ಇರಬಗೇರಾದಲ್ಲಿರುವ ಎಸ್‌ಬಿಐ ಶಾಖೆ, ಇದಲ್ಲದೇ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಇಂಡಿಯನ್ ಓವರ್‌ಸಿಸ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ತಮ್ಮ ವ್ಯವಹಾರ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲಿಸಿ ಬ್ಯಾಂಕ್ ಬಂದ್ ಮಾಡಿದ್ದವು.
ಕೇಂದ್ರ ಸರ್ಕಾರ ಬ್ಯಾಂಕ್‌ಗಳ ಜತೆಗೆ ಚರ್ಚೆ ನಡೆಸದೆ, ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಇದರಿಂದ ಸರ್ಕಾರದ ಅನುದಾನ ಖಾಸಗಿ ವ್ಯಕ್ತಿಗಳ ಪಾಲಾಗಲಿದ್ದು, ಶೇರ್ ಹೋಲ್ಡರ್‌ಗಳು ಹಾಗೂ ನೌಕರರು ಬೀದಿಗೆ ಬರಲಿದ್ದಾರೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸಂಘ ಒತ್ತಾಯಿಸಿದೆ.