

ಕಿತ್ತೂರು ರಾಣಿ ಚನ್ನಮ್ಮ ಜಯಂತಿ
ದೇವದುರ್ಗ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು. ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಚನ್ನಮ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಕಿತ್ತೂರು ಚನ್ನಮ್ಮ ಹೋರಾಟದ ದಿಟ್ಟ ಮನೋಭಾವನೆಯಿಂದ ಬ್ರಿಟಿಷರನ್ನು ಸೋಲಿಸಿದರು. ಚನ್ನಮ್ಮ ಅಪಾರ ದೇಶಭಕ್ತಿ ಯುವಕ ಮತ್ತು ಯುವತಿಯರಿಗೆ ಸ್ಫೂರ್ತಿಯಾಗಿದೆ. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮುಂಚಿತವಾಗಿಯೇ ಚನ್ನಮ್ಮ ಬ್ರಿಟಿಷರಿಗೆ ಪರಾಜಯಗೊಳಿಸಿದ್ದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚನ್ನಮ್ಮ, ಕೆಳದಿ ಚನ್ನಮ್ಮ, ಚಿತ್ರದುರ್ಗದ ಒನಕೆ ಓಬವ್ವ ಪುರುಷರಿಗೆ ಸಮನಾದ ವ್ಯಕ್ತಿತ್ವ ಹೊಂದಿದ್ದರು. ನಾಡು ಕಂಡ ವೀರ ವನಿತೆಯರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಶಿವರಾಜ್, ಪ್ರಮುಖರಾದ ಹನುಮಂತ ಮನ್ನಾಪುರ, ಇಕ್ಬಾಲ್ ಸಾಬ್, ಶಿವರಾಯ, ಹನುಮಯ್ಯ ಇತರರಿದ್ದರು.