

ದೇವದುರ್ಗ: ಅಧ್ಯಾತ್ಮ ಕಾರ್ಯಕ್ರಮದಿಂದ ಸಂಸ್ಕಾರ, ಮಾನವೀಯ ಮೌಲ್ಯಗಳ ವೃದ್ಧಿ ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹಲವು ಸಂದೇಶ ನೀಡಿದ್ದು, ಅವುಗಳನ್ನು ಅನುಸರಿಸಬೇಕಿದೆ. ಕಾಯಕದ ಮಹತ್ವ, ಮಾನವೀಯ ಮೌಲ್ಯಗಳ ಬಗ್ಗೆ ಬೋಧನೆ ಮಾಡಿದ್ದಾರೆ. ಮಕ್ಕಳಿಗೆ ಇವುಗಳ ಬಗ್ಗೆ ಬೋಧನೆ ಮಾಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ವೆಂಕಟೇಶ್, ಶಿರಸ್ತೇದಾರ್ ಗೋವಿಂದ ನಾಯಕ, ಅನಿಲ್ ಕುಮಾರ್, ಪ್ರವೀಣ್, ರವಿಕುಮಾರ್, ರಾಕೇಶ್, ಸಂಘ ಸಂಸ್ಥೆಗಳ ಮುಖಂಡರಾದ ರಂಗಪ್ಪ ಕೋತಿಗುಡ್ಡ, ಮೇಲಪ್ಪ ಬಾವಿಮನಿ, ಯಾದವ ಸಮಾಜದ ತಾಲೂಕು ಅಧ್ಯಕ್ಷ ಪ್ರಭು ರಾಘವೇಂದ್ರ, ಯಂಕಪ್ಪ, ಸೋಮನಾಥ ಯಾದವ್, ಯಲ್ಲಪ್ಪ ಆಲ್ದರ್ತಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಇತರರಿದ್ದರು.