ಸುಲ್ತಾನಪುರ ಮಠದಿಂದ ಬಡವರು, ಕೂಲಿಕಾರ್ಮಿಕರ ಕುಟುಂಬಗಳಿಗೆ ಧಾನ್ಯ ವಿತರಣೆ : ಶ್ರೀಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ನೇತೃತ್ವ

06042020 Devadurga Food Supply
Published on

ದೇವದುರ್ಗ: ಬಡವರು ಹಾಗೂ ಕೂಲಿಕಾರ್ಮಿಕರ ಕುಟುಂಬಗಳಿಗೆ ತಾಲೂಕಿನ ಸುಲ್ತಾನಪುರ ಶ್ರೀ ಮಠದಿಂದ ಸೋಮವಾರ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.

ಶ್ರೀ ಮಠದ ಪೀಠಾಧಿಪತಿ ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ ಬಡ ಕುಟುಂಬಗಳಿಗೆ ಅಕ್ಕಿ, ಗೋಧಿ, ಎಣ್ಣೆ ಸೇರಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು. ಕರೊನಾ ವೈರಸ್ ತಡೆಯಲು ಸರ್ಕಾರ ಲಾಕ್‌ಡೌನ್ ಆದೇಶ ಹೊರಡಿಸಿದ್ದು, ಸಾರ್ವಜನಿಕರು ಇದನ್ನು ಗೌರವಿಸಿ ರೋಗ ತಡೆಗೆ ಕೈಜೋಡಿಸಬೇಕು. ಲಾಕ್‌ಡೌನ್ ಮುಗಿಯುವವರೆಗೆ ಮನೆಯಲ್ಲೇ ಇದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಿ, ಸಾನಿಟೈಸರ್‌ನಿಂದ ಕೈತೊಳೆಯಬೇಕು ಎಂದು ಹೇಳಿದರು.

ನಂತರ ಹೂವಿನಹೆಡಗಿಯ ಹತ್ತು ಮೀನುಗಾರರ ಕುಟುಂಬಗಳು, ಪಟ್ಟಣದ 15ಕ್ಕೂ ಹೆಚ್ಚು ಫೋಟೋಗ್ರಾಫರ್ ಕುಟುಂಬ ಸೇರಿ ಸುಮಾರು 400 ಕುಟುಂಬಗಳಿಗೆ ಅಗತ್ಯ ಧಾನ್ಯ ವಿತರಣೆ ಮಾಡಲಾಯಿತು. ಇದಕ್ಕು ಮುನ್ನ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟದ ಪ್ಯಾಕೇಟ್, ಹಾಲು, ಹಣ್ಣು, ಬ್ರೇಡ್ ವಿತರಿಸಲಾಯಿತು.

ಪಿಎಸ್‌ಐ ಎಲ್.ಬಿ.ಅಗ್ನಿ, ಛಾಯಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಬೂದೆಪ್ಪ ಬಳೆ, ಗೌರವ ಅಧ್ಯಕ್ಷ ಸಂಗಮೇಶ ಅರಳಿ, ಮಹಾದೇವ ಪಾಟೀಲ್, ಯುವಾ ಬ್ರೀಗೇಡ್‌ನ ಗಂಗನಗೌಡ ಗೌರಂಪೇಟೆ, ಮಯೂರ ಸ್ವಾಮಿ, ಶರಣಬಸವ ನಾಗಡದಿನ್ನಿ, ಶಿವಕುಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net