ಉತ್ತಮ ಆರೋಗ್ಯವೇ ಎಲ್ಲರ ಸಂಪತ್ತಾಗಲಿ - ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ

DVD-4
ಸುಲ್ತಾನಪುರ ಮಠದಲ್ಲಿ ಶ್ರೀ ಪಂಚಾಕ್ಷರಿ ಜಾತ್ರೆ ನಿಮಿತ್ತ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರಯ್ಯ ಹಿರೇಮಠ, ರವಿಶಂಕರಯ್ಯ ಬೂದಿನಾಳ, ಚೋಳಯ್ಯ ಹಿರೇಮಠ ಇದ್ದರು.
Published on

ದೇವದುರ್ಗ: ಪ್ರಸ್ತುತ ಕಲುಷಿತ ವಾತಾವರಣದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಶಿಕ್ಷಣ, ಸಂಸ್ಕಾರ ಹಾಗೂ ಉತ್ತಮ ಆರೋಗ್ಯವೇ ನಮ್ಮ ಸಂಪತ್ತು ಆಗಬೇಕು ಎಂದು ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು ಹೇಳಿದರು.

ಗಬ್ಬೂರು ಸಮೀಪದ ಸುಲ್ತಾನಪುರದಲ್ಲಿ ಶ್ರೀಪಂಚಾಕ್ಷರಿ ಜಾತ್ರೆ ನಿಮಿತ್ತ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರಬೆಕು. ಯಾವುದೇ ರೋಗ ನಿರ್ಲಕ್ಷಿಸುವುದು ಅಪಾಯಕಾರಿ. ಸಣ್ಣ ಕಾಯಿಲೆ ಬಂದರೆ ತಕ್ಷಣವೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಜೀವನ ಸರಳವಾಗಲಿದೆ ಎಂದರು.

ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಆರೋಗ್ಯ ತಪಾಸಣೆ ಜರುಗಿತು. ದೇವಸ್ಥಾನ ಸಮಿತಿ ಮುಖ್ಯಸ್ಥ ಪಂಚಯ್ಯಸ್ವಾಮಿ, ಭಕ್ತರಾದ ಚಂದ್ರಶೇಖರಯ್ಯ ಹಿರೇಮಠ, ರವಿಶಂಕರಯ್ಯ ಬೂದಿನಾಳ, ಚೋಳಯ್ಯ ಹಿರೇಮಠ, ರೆಡ್ಡೆಪ್ಪಗೌಡ, ಗಂಗನಗೌಡ ಇತರರಿದ್ದರು.

ಆತ್ಮ ಜ್ಯೋತ್ಯೋತ್ಸವ: ಜಾತ್ರೆ ನಿಮಿತ್ತ ಬೆಳಗ್ಗೆ ಶ್ರೀ ಪಂಚಾಕ್ಷರಿ ಶಿವಾಚಾರ್ಯರ ಆತ್ಮ ಜ್ಯೋತ್ಯೋತ್ಸವ ಕಾರ್ಯಕ್ರಮ ಜರುಗಿತು. ಊರೊಳಗಿನ ಮಠದಿಂದ ಶ್ರೀಮಠದವರೆಗೆ ಸುಮಂಗಲೆಯರ ಕಳಸದೊಂದಿಗೆ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಬೆಳಗ್ಗೆ ಶ್ರೀಗಳ ಕರ್ತೃಗದ್ದುಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿತು. ಸಂಜೆ ಗಬ್ಬೂರಿನ ಶ್ರೀ ಶಿವಶರಣ ಬಿಬ್ಬಿ ಬಾಚರಯ್ಯ ಜಯಂತಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net