ಬಿರುಗಾಳಿಯಿಂದ ಅಪಾರ ಹಾನಿ, ವಿವಿಧೆಡೆ ವಿದ್ಯುತ್ ಕಡಿತ

230422 Devadurga Storm Damage
ದೇವದುರ್ಗದಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಹಾನಿಯಾಗಿರುವುದು.
Published on

ದೇವದುರ್ಗ: ತಾಲೂಕಿನ ವಿವಿಧೆಡೆ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿ ಅವಾಂತರ ಸೃಷ್ಟಿಸಿದ್ದು, ಮನೆಗಳಿಗೆ ಹಾನಿ ಮಾಡಿದೆ. ಹಲವೆಡೆ ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿದ್ದು, ಜನ ವಿದ್ಯುತ್ ಇಲ್ಲದೆ ಸಮಸ್ಯೆ ಎದುರಿಸಿದರು.

ಶುಕ್ರವಾರ ಸಂಜೆ ಹಾಗೂ ರಾತ್ರಿ ಮಳೆ ಸಹಿತ ಬಿರುಗಾಳಿ ಬೀಸಿತು. ಪಟ್ಟಣದ ಹೋಟೆಲ್‌ವೊಂದಕ್ಕೆ ಬಿರುಗಾಳಿ ಭಾರಿ ಹೊಡೆತ ನೀಡಿದೆ. ಹೋಟೆಲ್‌ನ ಹಾಲ್ ಹಾಗೂ ಅಡುಗೆ ಕೋಣೆಗೆ ಹಾಕಿದ್ದ ಟಿನ್‌ಶೆಡ್ ಸಂಪೂರ್ಣ ಕಿತ್ತುಹೋಗಿದ್ದು, ದವಸ ಧಾನ್ಯ ಹಾಗೂ ಇತರ ಸಾಮಗ್ರಿಗಳು ಹಾಳಾಗಿವೆ. ವಿವಿಧ ಗ್ರಾಮಗಳಲ್ಲಿ ಮನೆ ಹಾಗೂ ಗುಡಿಸಲಿಗೆ ಹಾನಿಯಾಗಿದ್ದು, ರೈತರ ಮೇವಿನ ಬಣವೆಗೂ ಬಿರುಗಾಳಿ ಹಾನಿ ಮಾಡಿದೆ. ಜಾಲಹಳ್ಳಿ ವ್ಯಾಪ್ತಿಯಲ್ಲಿ 5ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು (ಟಿಸಿ) ನೆಲಕ್ಕುರುಳಿವೆ. ಕೃಷಿ ಪಂಪ್‌ಸೆಟ್‌ಗೆ ಅಳವಡಿಸಿದ್ದ ಟಿಸಿಗಳು ಬಿದ್ದಿರುವುದು ಸಮಸ್ಯೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net