ಸತ್ಯಪ್ರತಿಪಾದನೆ ಸತ್ಯಾಗ್ರಹಕ್ಕೆ ಬೆಂಬಲ ನೀಡಿ, ಶಾಸಕ ಕೆ.ಶಿವನಗೌಡ ನಾಯಕಗೆ ಬೇಡಜಂಗಮ ಸಮುದಾಯ ಮನವಿ

Devadurga Bedajangama Community Appeal
ದೇವದರ್ಗದಲ್ಲಿ ಶಾಸಕ ಕೆ.ಶಿವನಗೌಡ ನಾಯಕಗೆ ಬೇಡಜಂಗಮ ಸಮುದಾಯದವರು ಮನವಿ ಸಲ್ಲಿಸಿದರು.
Published on

ದೇವದುರ್ಗ: ಬೇಡ ಜಂಗಮ ಸಮುದಾಯಕ್ಕೆ ಎಸ್ಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಸತ್ಯ ಪ್ರತಿಪಾದನೆ ಸತ್ಯಾಗ್ರಹಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶಾಸಕ ಕೆ.ಶಿವನಗೌಡ ನಾಯಕಗೆ ತಾಲೂಕು ಬೇಡಜಂಗಮ ಸಮುದಾಯದ ಪ್ರಮುಖರು ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಬಡತನದಲ್ಲಿ ಜೀವನ ನಡೆಸುತ್ತಿರುವ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವುದು ಅಗತ್ಯವಾಗಿದೆ. ಸಂವಿಧಾನಬದ್ಧವಾದ ಮೀಸಲು ಸೌಲಭ್ಯ ನೀಡುವಂತೆ ಒತ್ತಾಯಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಜೂ.30ರಿಂದ ಹೋರಾಟ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿ ಸಹಾಯ ಮಾಡಬೇಕು. ನಮ್ಮ ಪರವಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.

ತಾಲೂಕು ಅಧ್ಯಕ್ಷ ಬಸವಲಿಂಗಯ್ಯ ಸ್ವಾಮಿ ಚಿಕ್ಕಮಠ, ಪ್ರಮುಖರಾದ ಗುರುಪಾದಯ್ಯ ಸ್ವಾಮಿ ಹಿರೇಮಠ, ಗೂಳಯ್ಯಸ್ವಾಮಿ ಗುಣಾರಿ, ಸಿದ್ದಯ್ಯ ಸ್ವಾಮಿ ಚಿಕ್ಕಮಠ, ಶಾಂತಕುಮಾರ ಮಠ, ವಿಶ್ವನಾಥ ಸ್ವಾಮಿ ನೀಲಗಲ್, ವಿಶ್ವನಾಥ ಸ್ವಾಮಿ ನಾಗಡದಿನ್ನಿ, ಶರಣಯ್ಯ ಸ್ವಾಮಿ ಬಿಲೈ, ಆದಯ್ಯ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net