ಶರಣರ ಕಾಯಕನಿಷ್ಠೆ ಎಲ್ಲರಿಗೂ ಮಾದರಿ

060422 Devadurga Devara Dasimayya Jayanti
ದೇವದುರ್ಗ ತಾಲೂಕು ಆಡಳಿತ ಸೌಧದಲ್ಲಿ ಕಾಯಕ ಯೋಗಿ ದೇವರ ದಾಸಿಮಯ್ಯ ಜಯಂತಿಯನ್ನು ಬುಧವಾರ ಆಚರಿಸಲಾಯಿತು.
Published on

ದೇವದುರ್ಗ: ಶರಣರು, ಸಂತರು, ದಾಸರು ಈ ನಾಡಿಗೆ ಕಾಯಕನಿಷ್ಠೆ ತತ್ವವನ್ನು ನೀಡಿದ್ದು, ಅವರ ಆದರ್ಶ ಜೀವನ, ಮೌಲ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಯಕ ಯೋಗಿ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ದೇವರ ದಾಸಿಮಯ್ಯರ ವಚನಗಳು ಜನಸಾಮಾನ್ಯರಿಗೂ ಅರ್ಥವಾಗುತ್ತವೆ. ಅವರ ವಚನಗಳಲ್ಲಿ ಆದರ್ಶ ಮೌಲ್ಯಗಳನ್ನು ಕಾಣಬಹುದು. ಪ್ರತಿಯೊಬ್ಬರೂ ಶರಣರ ಮಾರ್ಗದಲ್ಲಿ ಮುನ್ನಡೆದರೆ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಶಿವರಾಜ್, ಪ್ರಮುಖರಾದ ಶರಣಬಸವ ಸ್ವಾಮಿ, ಅಮರೇಶ್ ರಾಥೋಡ್, ರವಿಕುಮಾರ್ ಬಲ್ಲಿದ, ಡಿ.ರಾಮಣ್ಣ ನಾಯಕ್, ಹನುಮಂತ ಮನ್ನಾಪುರ, ಶಾಂತಯ್ಯ ಸ್ವಾಮಿ, ಪ್ರಕಾಶಗೌಡ, ನಾಗೇಂದ್ರಪ್ಪ, ಬಸವರಾಜ್ ಕರಡಕಲ್, ಪ್ರಕಾಶ್ ನೀಲಿ, ಮಲ್ಲೇಶ ಮಾಶೆಟ್ಟಿ, ಭೋಜರಾಜ ಮಿಣಜಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net