ಅಂಧನಿಗೆ ಕಾರ್ಯಕರ್ತೆಯ ಸಹಾಯ ಹಸ್ತ

04012020 Devadurga Rural Help
Published on

10 ಸಾವಿರ ರೂ.ಸಹಾಯಧನ ನೀಡಿದ ಚನ್ನಮ್ಮ | ಸಾವಿತ್ರಿಬಾಯಿ ಫುಲೆ ಜನ್ಮದಿನ ನಿಮಿತ್ತ

ದೇವದುರ್ಗ ಗ್ರಾಮೀಣ: ತಾಲೂಕಿನ ಜಾಲಹಳ್ಳಿ ಗ್ರಾಮದ ತಳವಾರ ಓಣಿಯ ಅಂಧ ಚಂದ್ರಶೇಖರ್‌ಗೆ ಅಂಗನವಾಡಿ ಕಾರ್ಯಕರ್ತೆ ಚನ್ನಮ್ಮ ಚಿಕ್ಕಲ್ ಹತ್ತು ಸಾವಿರ ರೂ. ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹುಟ್ಟಿನಿಂದಲೇ ಚಂದ್ರಶೇಖರಗೆ ಎರಡೂ ಕಣ್ಣು ಕಾಣುತ್ತಿಲ್ಲ. ಜಮೀನು ಹೊಂದಿರದ ಈತ ಸರ್ಕಾರ ನೀಡುವ ಮಾಸಾಶನದಲ್ಲೇ ಜೀವನ ನಡೆಸುತ್ತಿದ್ದಾರೆ. ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನ ನಿಮಿತ್ತ ಅಂಗನವಾಡಿ ಕಾರ್ಯಕರ್ತೆ ಚನ್ನಮ್ಮ ಚಿಕ್ಕಲ್ ಅಶಕ್ತಗೆ ದಾನದ ಮೂಲಕ ಅರ್ಥಪೂರ್ಣ ಜಯಂತಿ ಆಚರಿಸಿದ್ದಾರೆ.

ಚಂದ್ರಶೇಖರಗೆ ಮೂವರು ಮಕ್ಕಳಿದ್ದು, ಯಾವುದೇ ಚರ ಹಾಗೂ ಸ್ಥಿರಾಸ್ತಿ ಹೊಂದಿಲ್ಲ. ಸರ್ಕಾರ ಹಾಗೂ ಸಂಘ ಸಂಸ್ಥೆಯಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಇಂತಹ ವ್ಯಕ್ತಿಗೆ ಚನ್ನಮ್ಮ ಚಿಕ್ಕಲ್ ಸಹಾಯಧನ ನೀಡಿರುವುದು ಸಾರ್ವಜನಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೆಚ್ಚುಗೆಗೆ ಕಾರಣವಾಗಿದೆ. ಮೇಲ್ಚಿಚಾರಕಿ ನಿರ್ಮಲಾ ದೇವಿ, ಅಂಗನವಾಡಿ ಕಾರ್ಯಕರ್ತೆಯರಾದ ಶಶಿಕಲಾ, ಕುಪ್ಪಮ್ಮ, ವಿಜಯಲಕ್ಷ್ಮ್ಮಿ ಪಾಟೀಲ್ ಹಾಗೂ ಮನೆಯ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net