ನದಿದಂಡೆಯಲ್ಲಿ ಕೃಷಿಕರಿಗೆ ಅಧ್ಯಯನ ಶಿಬಿರ ಇಂದಿನಿಂದ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಮಾಹಿತಿ

Devadurga farmers association President Prabhakara
ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ
Published on

ದೇವದುರ್ಗ: ತಾಲೂಕಿನ ಗೂಗಲ್ ಅಲ್ಲಮಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಕಲ್ಯಾಣ ಕರ್ನಾಟಕದ ಆಯ್ದ ಕಾರ್ಯಕರ್ತರಿಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಎರಡು ದಿನಗಳ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ತಿಳಿಸಿದರು.

ಶಿಬಿರದಲ್ಲಿ 9ಗೋಷ್ಠಿಗಳನ್ನು ಆಯೋಜಿಸಿದ್ದು, ನಿವೃತ್ತ ಕುಲಪತಿ ಎಸ್.ಎ.ಪಾಟೀಲ್ ಶಿಬಿರ ಉದ್ಘಾಟಿಸುವರು. ಸಂಘದ ರಾಜ್ಯ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ ಅಧ್ಯಕ್ಷತೆ ವಹಿಸುವರು. ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಪಾ, ಜೆ.ಎಂ. ವೀರಸಂಗಯ್ಯ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ ವಿ.ಪಾಟೀಲ್ ಸೇರಿ ಗಣ್ಯರು ಭಾಗವಹಿಸರು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಜ.7ರಂದು ಬೆಳಗ್ಗೆ ಮೊದಲ ಗೋಷ್ಠಿಯಲ್ಲಿ ದೆಹಲಿ ಐತಿಹಾಸಿಕ ರೈತರ ಹೋರಾಟ ಮತ್ತು ಕಲಿಸಿದ ಪಾಠಗಳು ವಿಷಯ ಕುರಿತು ನಿವೃತ್ತ ಪ್ರಾಚಾರ್ಯ ಅಲ್ಲಮಪ್ರಭು ಬೆಟ್ಟದೂರು, ಎರಡನೇ ಗೋಷ್ಠಿಯಲ್ಲಿ ಸಣ್ಣ ಹಿಡುವಳಿ ಕೃಷಿ ಬದುಕು ಕುರಿತು ರೈತ ಮುಖಂಡ ಮಧುಚಂದನ್, ಮೂರನೇ ಗೋಷ್ಠಿಯಲ್ಲಿ ರೈತ ಚಳವಳಿ ಅಂದು, ಇಂದು ವಿಷಯ ಕುರಿತು ಬಡಗಲಪುರ ನಾಗೇಂದ್ರ ಹಾಗೂ 4ನೇ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಮುಖ ಹೋರಾಟಗಳು ಕುರಿತು ಚಾಮರಸ ಮಾಪಾ ವಿಷಯ ಮಂಡನೆ ಮಾಡುವರು.

ಎರಡನೇ ದಿನ ಜ.8ರಂದು ಮೊದಲ ಗೋಷ್ಠಿಯಲ್ಲಿ ಕೃಷಿ ಕ್ಷೇತ್ರಕ್ಕೆ ದೊರಕುವ ಸರ್ಕಾರಿ ಸೌಲಭ್ಯಗಳು ವಿಷಯ ಕುರಿತು ಬಸವರಾಜ ಕಲಕುಪ್ಪಿ, ರೈತರು ತಿಳಿದಿರಬೇಕಾದ ಸಾಮಾನ್ಯ ಕಾನೂನುಗಳು ವಿಷಯ ಕುರಿತು ಹಿರಿಯ ವಕೀಲ ಮಸ್ಕಿ ನಾಗರಾಜ, 3ನೇ ಗೋಷ್ಠಿಯಲ್ಲಿ ರೈತ ಸಂಘದ ಸಂವಿಧಾನದ ಆಶಯಗಳು ಕುರಿತು ಜೆ.ಎಂ. ವೀರಸಂಗಯ್ಯ, 4ನೇ ಗೋಷ್ಠಿಯಲ್ಲಿ ಹತ್ತಿ, ಭತ್ತ ಮತ್ತು ಮೆಣಸಿನಕಾಯಿ ಸಮಗ್ರ ಕೃಷಿ ಕುರಿತು ನೈಸರ್ಗಿಕ ಕೃಷಿ ತಜ್ಞ ಸ್ವಾಮಿ ಆನಂದ, ಸಂಜೆ 4ಕ್ಕೆ ಅಧ್ಯಯನ ಶಿಬಿರದ ಅನುಭವಿಗಳ ಕುರಿತು ಸಂವಾದ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net