ಎಲ್ಲರೂ ಕಾನೂನು ಸುವ್ಯವಸ್ಥೆ ಕಾಪಾಡಿ

devadurga protest
ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು. ಪ್ರಮುಖರಾದ ಹನುಮಂತಪ್ಪ ಮನ್ನಾಪುರ, ಎಚ್.ಶಿವರಾಜ, ಮೋಹನ್ ಬಲ್ಲಿದವ್, ಟಿ.ಜಯರಾಜ್, ವಿಶ್ವನಾಥ ಬಲ್ಲಿದವ್, ಎಸ್.ನರಸಣ್ಣ ಗೌಡ ನಾಯಕ, ಗುಂಡಪ್ಪ ನಾಯಕ ಇತರರಿದ್ದರು.
Published on

ದೇವದುರ್ಗ: ಮಾನ್ವಿ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೋಮವಾರ ಪ್ರತಿಭಟನೆ ನಡೆಸಿತು.

ಜಿಲ್ಲೆ ಸೇರಿ ರಾಜ್ಯಾದ್ಯಂತ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸದ ಕಾರಣ ಇಂಥ ಘಟನೆಗಳು ಮರುಕಳಿಸುತ್ತಿವೆ. ಪ್ರಕರಣವನ್ನು ತ್ವರಿತ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಬೇಕು. ಅತ್ಯಾಚಾರ ಪ್ರಕರಣ ಕಂಡುಬಂದರೆ ವಿಳಂಬ ಮಾಡದೆ ರಾಕ್ಷಸರನ್ನು ಕಂಡಲ್ಲಿ ಗುಂಡಿಡುವ ಕಾನೂನು ಜಾರಿಗೊಳಿಸಬೇಕು. ಸಂತ್ರಸ್ತೆಯರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಸಿಂಧನೂರಿನಲ್ಲಿ ವಿದ್ಯಾರ್ಥಿನಿ ಕೊಲೆ ಹಾಗೂ ಜಾಲಹಳ್ಳಿಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದವರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಹನುಮಂತಪ್ಪ ಮನ್ನಾಪುರ, ಎಚ್.ಶಿವರಾಜ, ಮೋಹನ್ ಬಲ್ಲಿದವ್, ಟಿ.ಜಯರಾಜ್, ವಿಶ್ವನಾಥ ಬಲ್ಲಿದವ್, ಎಸ್.ನರಸಣ್ಣ ಗೌಡ ನಾಯಕ, ಗುಂಡಪ್ಪ ನಾಯಕ, ಮಲ್ಲಿಕಾರ್ಜುನ, ಕ್ರಾಂತಿಕುಮಾರ, ಮೆಹಬೂಬ್, ಅಬ್ದುಲ್ ಗಫಾರ್, ನವಾಜ್, ಶಮೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net