ಮಕ್ಕಳಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚು; ಡಾ.ಆರ್.ಎಸ್.ಹುಲಿಮನಿಗೌಡ ಹೇಳಿಕೆ

03082022 devadurga news
Published on

ದೇವದುರ್ಗ: ಮಳೆಯಿಂದಾಗಿ ಸಾಂಕ್ರಾಮಿಕ ರೋಗಿಗಳು ಹರಡುವ ಸಾಧ್ಯತೆಯಿದೆ. ಅದರಲ್ಲೂ ಮಕ್ಕಳಲ್ಲಿ ರೋಗ ಹರಡುವ ಸಾಧ್ಯತೆ ಅಧಿಕ. ಪ್ರತಿ ಮಗುವಿನ ಆರೋಗ್ಯ ರಕ್ಷಣೆ ಬಹುಮುಖ್ಯ ಎಂದು ಟಿಎಚ್‌ಒ ಡಾ.ಆರ್.ಎಸ್.ಹುಲಿಮನಿ ಗೌಡ ಹೇಳಿದರು.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಆ.1ರಿಂದ 15ರವರೆಗೆ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಆಯೋಜಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಮಕ್ಕಳ ಲೆಕ್ಕ ಮಾಡಲಿದ್ದಾರೆ ಎಂದರು.

ತಾಲೂಕಿನಲ್ಲಿ 50 ಸಾವಿರ ಮನೆಗಳಿಗೆ ಭೇಟಿ ನೀಡುವ ಗುರಿಯಿದ್ದು, 5 ವರ್ಷದೊಳಗಿನ 37,980 ಮಕ್ಕಳಿದ್ದು, ಆರೋಗ್ಯ ತಪಾಸಣೆ ಮಾಡಲಾಗುವುದು. 244 ಆಶಾ ಕಾರ್ಯಕರ್ತೆಯರು, 476 ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಒಆರ್‌ಎಸ್+ ಜಿಂಕ್ ಮಾತ್ರ ವಿತರಿಸಲಿದ್ದಾರೆ. ಆ.10ರಿಂದ 17ರವರೆಗೆ ರಾಷ್ಟ್ರೀಯ ಜಂತು ನಿವಾರಣೆ ಕಾರ್ಯಕ್ರಮ ನಡೆಯಲಿದೆ. ಆ.1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net