ಜೀವನ ಜ್ಯೋತಿ ಬಿಮಾ ಚೆಕ್ ವಿತರಣೆ

K Irabagera Jeevan Jyoti Bheema Check issue
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಫಲಾನುಭವಿಗೆ ದೇವದುರ್ಗ ತಾಲೂಕು ಕೆ.ಇರಬಗೇರಾದ ಎಸ್‌ಬಿಐ ಶಾಖೆಯಲ್ಲಿ ವಿಮಾ ಪರಿಹಾರ ಚೆಕ್ ನೀಡಲಾಯಿತು.
Published on

ದೇವದುರ್ಗ: ಕೆ.ಇರಬಗೇರಾ ಗ್ರಾಮದಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಫಲಾನುಭವಿಗೆ ಎಸ್‌ಬಿಐ ಶಾಖೆಯಲ್ಲಿ ಶುಕ್ರವಾರ ಎರಡು ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಲಾಯಿತು.

ಶಾಖಾ ವ್ಯವಸ್ಥಾಪಕ ವಿನೋದ್ ವಿ.ಜೋಶಿ ಮಾತನಾಡಿ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ ಕೂಲಿಮಾಡುತ್ತಿದ್ದ ಕೂಲಿಕಾರ್ಮಿಕ ಮಹಿಳೆ ತಾಯಮ್ಮ ವಾರ್ಷಿಕ 330 ರೂ. ವಿಮೆ ತುಂಬಿದ್ದರು. ಅವರು ಇತ್ತೀಚೆಗೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ವಿಮೆ ಪರಿಹಾರದ ಚೆಕ್ ಬಂದಿದೆ. ಮೃತ ತಾಯಮ್ಮಳಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಗಂಡನ ಹೆಸರು ನಾಮಿನಿ ಮಾಡಿದ್ದರಿಂದ ಅವರಿಗೆ ಚೆಕ್ ನೀಡಲಾಗಿದೆ. ಇದನ್ನು ಅವರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net