

ದೇವದುರ್ಗ: ತಾಲೂಕಿನ ಜಾಲಹಳ್ಳಿ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬುಧವಾರ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿ ಬರೊಬ್ಬರಿ 12 ಲಕ್ಷ ರೂ. ಮೌಲ್ಯದ 25ವಿವಿಧ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ವಿರೂಪಾಕ್ಷಿ ಮುದಕಪ್ಪ ನಾಯಕ ಜಾಗೀರ್ ಜಾಡಲದಿನ್ನಿ ಹಾಗೂ ಪವನ್‌ಕುಮಾರ ಲಕ್ಷ್ಮಣ ನಾಯಕ ಬೂಮನಗುಂಡ ಬಂಧಿತ ಆರೋಪಿಗಳು. ಪಿಎಸ್‌ಐ ಸುಜಾತ ನೇತೃತ್ವದಲ್ಲಿ ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಬಳ್ಳಾರಿ, ಸಿಂಧನೂರು, ಇಲಕಲ್, ರಾಯಚೂರು ಸೇರಿ ವಿವಿಧೆಡೆ ಇದ್ದ ಸುಮಾರು 12ಲಕ್ಷ ರೂ. ಮೌಲ್ಯದ 25ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಎಸ್ಪಿ ಬಿ.ನಿಖಿಲ್, ಡಿಎಸ್ಪಿ ಆರ್.ಶಿವಕುಮಾರ, ಡಿವೈಎಸ್‌ಪಿ ಎಸ್.ಶಿವಕುಮಾರ, ಸಿಪಿಐ ಖಾಜಾಹುಸೇನ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.
ದಾಳಿವೇಳೆ ಸಿಬ್ಬಂದಿ ರಾಜ್‌ಕುಮಾರ, ಉಮೇಶ, ಬಾಲಗೌಡ, ದೇವರಾಜ, ರಾಘವೇಂದ್ರ, ಹನುಮಂತ, ಅಯ್ಯಪ್ಪ, ಶರಣಬಸವ, ವೀರೇಶ ಇದ್ದರು.
ನಿರಾಳ: ತಾಲೂಕಿನಲ್ಲಿ ಇತ್ತೀಚೆಗೆ ವಾಹನ ಹಾಗೂ ಮನೆಗಳ್ಳತನ ಮಿತಿಮೀರಿತ್ತು. ಜಾಲಹಳ್ಳಿ ಹಾಗೂ ಅರಕೇರಾ ಹೋಬಳಿಯಲ್ಲಿ ಕಳ್ಳತನ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಇದರಿಂದ ಸಾರ್ವಜನಿಕರು ಬೆಚ್ಚಿ ಬೀಳುತ್ತಿದ್ದು, ಎರಡು ವರ್ಷಗಳಿಂದ ಕಳ್ಳತನ ಘಟನೆಗಳು ಮಿತಿಮೀರಿದ್ದವು. ಪೊಲೀಸರು ದಾಳಿ ನಡೆಸಿ ಕಳ್ಳರ ಬಂಧನ ಮಾಡಿರುವುದು ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.