ಬಯಲು ಶೌಚದಿಂದ ಸಾಂಕ್ರಾಮಿಕ ರೋಗ

250322 Devadurga A street drama about a toilet
ದೇವದುರ್ಗ ಪುರಸಭೆ ಆವರಣದಲ್ಲಿ ಬಯಲು ಶೌಚಮುಕ್ತ ಕುರಿತು ಬೀದಿ ನಾಟಕಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
Published on

ದೇವದುರ್ಗ: ಬಯಲು ಶೌಚಮುಕ್ತ ನಗರಕ್ಕಾಗಿ ಜಾಗೃತಿ ಜಾಥಾ ಹಾಗೂ ಕಲಾ ತಂಡಗಳಿಂದ ಬೀದಿ ನಾಟಕ ಪ್ರದರ್ಶನಕ್ಕೆ ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ನೈರ್ಮಲ್ಯ ಅಧಿಕಾರಿ ನರಸರೆಡ್ಡಿ ಮಾತನಾಡಿ, ಬಯಲು ಶೌಚದಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಮಲೇರಿಯಾ, ಮೆದುಳು ಜ್ವರ, ಮುಂತಾದ ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟುವುದಕ್ಕೆ ಪ್ರತಿಯೊಬ್ಬರೂ ಮನೆಯಲ್ಲಿ ಶೌಚಗೃಹ ನಿರ್ಮಿಸಿಕೊಳ್ಳಬೇಕು. ಕಸ ಎಲ್ಲೆಂದರಲ್ಲಿ ಎಸೆಯದೆ, ಪುರಸಭೆ ವಾಹನದಲ್ಲಿ ಹಾಕಬೇಕು. ಪರಿಸರ ಸಂರಕ್ಷಣೆ, ಸ್ವಚ್ಛತೆಯಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದರು.

ಪುರಸಭೆ ಕಿರಿಯ ಇಂಜಿನಿಯರ್ ಅಹಮ್ಮದ್, ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರ, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಶಿವರಾಜ್, ಅಮ್ಜಾದ್, ಭೀಮಶಂಕರ್, ರಾಜು ಬಾಗೂರ್, ಭೀಮರಾಯ ಭಂಡಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net