ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಕಠಿಣಕ್ರಮ, ಪಿಐ ಕೆ.ಹೊಸಕೇರಪ್ಪ ಎಚ್ಚರಿಕೆ

SHANTHI SABHE
ದೇವದುರ್ಗದ ಪೊಲೀಸ್ ಠಾಣೆಲ್ಲಿ ಆಯೋಜಿಸಿದ್ದ ಶಾಂತಿಪಾಲನೆ ಸಭೆಯಲ್ಲಿ ಪಿಐ ಕೆ.ಹೊಸಕೇರಪ್ಪ ಮಾತನಾಡಿದರು. ಪುರಸಭೆ ಸದಸ್ಯರಾದ ಮಾನಪ್ಪ ಮೇಸ್ತ್ರಿ, ನಾಗರಾಜ್ ಗೋಗಿ, ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ, ರಂಗಪ್ಪ ಕೋತಿಗುಡ್ಡ, ಬಸವರಾಜಪ್ಪ ಇದ್ದರು.
Published on

ದೇವದುರ್ಗ: ಗಣೇಶ ಹಬ್ಬದಂದು ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸ್ಥಳೀಯ ಆಡಳಿತ, ಪೊಲೀಸರ ಸೂಚನೆ ಅನುಸರಿಸಬೇಕು. ಕಾನೂನು ಉಲ್ಲಂಘಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಪಿಐ ಕೆ.ಹೊಸಕೇರಪ್ಪ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿಪಾಲನಾ ಸಭೆಯಲ್ಲಿ ಭಾನುವಾರ ಮಾತನಾಡಿದರು. ಸರ್ಕಾರ ನೀಡುವ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸಂಘಟನೆಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಆಡಳಿತದ ಕಡ್ಡಾಯವಾಗಿ ಪರವಾಗನಿ ಪಡೆದುಕೊಳ್ಳಬೇಕು. ಸ್ಥಳೀಯ ಪುರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಗೆ ಮನವಿ ಪತ್ರ ನೀಡಿ ಅನುಮತಿ ಪಡೆದು ಸೂಚಿತ ಸ್ಥಳದಲ್ಲಿ ಗಣಪತಿ ಕೂಡಿಸಬೇಕು. ಮೆರವಣಿಗೆ ಹಾಗೂ ವಿಸರ್ಜನೆ ಸಮಯದಲ್ಲಿ ಸಂಯಮದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಸದಸ್ಯರಾದ ಮಾನಪ್ಪ ಮೇಸ್ತ್ರಿ, ನಾಗರಾಜ್ ಗೋಗಿ, ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ, ರಂಗಪ್ಪ ಕೋತಿಗುಡ್ಡ, ಬಸವರಾಜಪ್ಪ, ಜಗನ್ನಾಥ್ ಆರ್.ನಾಯಕ, ವೆಂಕಟೇಶ್, ರವಿಪ್ರಕಾಶ್ ಅಕ್ಕರಕಿ, ಹೊನ್ನಪ್ಪ ಗುಂಡುಗುರ್ತಿ, ಮಲ್ಲಿಕಾರ್ಜುನ್ ನಾಯಕ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net