ಒಂದೇ ದಿನದಲ್ಲಿ 60 ಅರ್ಜಿ ವಿಲೇವಾರಿ

Devadurga gabbur nadatashil office
ದೇವದುರ್ಗ ತಾಲೂಕು ಗಬ್ಬೂರು ನಾಡಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೌತಿಖಾತೆ ಅದಾಲತ್ ಕಾರ್ಯಕ್ರಮದಲ್ಲಿ ನಾಡ ತಹಸೀಲ್ದಾರ್ ಬಸವರಾಜ ಫಲಾನುಭವಿಗೆ ಪಹಣಿ ವಿತರಣೆ ಮಾಡಿದರು. ಕಂದಾಯ ನಿರೀಕ್ಷಕ ಹನುಮಂತ್ರಾಯ ಹೊನ್ನಕಾಟಮಳ್ಳಿ, ಗ್ರಾಮಾಡಳಿತ ಅಧಿಕಾರಿಗಳಾದ ಯಂಕಪ್ಪ, ಸಂತೋಷ, ರೇವಣಸಿದ್ದಪ್ಪ, ಪರಶುರಾಮ್ ಇದ್ದರು.
Published on

ದೇವದುರ್ಗ: ಸಾರ್ವಜನಿಕರು, ಬಡವರು ಹಾಗೂ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಸಹಾಯಕ ಆಯುಕ್ತರ ಸೂಚನೆ ಮೇರೆಗೆ ಪೌತಿ ಅದಾಲತ್ ಹಾಗೂ ಆಧಾರ್ ಜೋಡಣೆ ಆಂದೋಲನಾ ಆಯೋಜಿಸಲಾಗಿದೆ. ಸಾರ್ವಜನಿಕರು ಅದಾಲತ್ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಾಡ ತಹಸೀಲ್ದಾರ್ ಬಸವರಾಜ ಹೇಳಿದರು.

ತಾಲೂಕಿನ ಗಬ್ಬೂರು ನಾಡಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಪೌತಿ ಖಾತೆ ಪಿಂಚಣಿ ಅದಾಲತ್ ಹಾಗೂ ಪಹಣಿಗೆ ಆಧಾರ್ ಕಾರ್ಡ್ ಜೋಡಣೆ ಆಂದೋಲನಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಮೂಲವಾರಸುದಾರ ಮರಣ ಹೊಂದಿದರೆ ಅವರ ಹೆಸರಿನಲ್ಲಿರುವ ಪಹಣಿಯನ್ನು ಅವರ ಪತ್ನಿ, ಮಕ್ಕಳಿಗೆ ಮಾಡುವುದು ಪೌತಿ ಖಾತೆ. ಇದರಡಿ ಹೋಬಳಿಯ 60 ಅರ್ಜಿ ಒಂದೇ ದಿನದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪಿಂಚಣಿ ಆಂದೋಲನದಡಿ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ವೃದ್ಧ್ಯಾಪ ವೇತನ, ಮನಸ್ವಿನಿ, ಮೈತ್ರಿ ಹಾಗೂ ಅಂಗವಿಕಲರಿಗೆ ಪಿಂಚಣಿ ನೀಡುವ ಯೋಜನೆ 45 ಅರ್ಜಿ ಹಾಗೂ ಕಲ್ಯಾಣ ಕರ್ನಾಟಕ ಪ್ರಮಾಣಪತ್ರದ 60 ಅರ್ಜಿ, ಪಹಣಿಗೆ ಆಧಾರ್ ಕಾರ್ಡ್ ಜೋಡಣೆ 50 ಅರ್ಜಿ ವಿಲೇವಾರಿ ಮಾಡಲಾಗಿದೆ. ಹೋಬಳಿಯ 40 ಹಳ್ಳಿಗಳಲ್ಲಿ ಶೇ.82 ಪ್ರಗತಿ ಸಾಧಿಸಲಾಗಿದೆ ಎಂದರು.

ಕಂದಾಯ ನಿರೀಕ್ಷಕ ಹನುಮಂತ್ರಾಯ ಹೊನ್ನಕಾಟಮಳ್ಳಿ, ಗ್ರಾಮಾಡಳಿತ ಅಧಿಕಾರಿಗಳಾದ ಯಂಕಪ್ಪ, ಸಂತೋಷ, ರೇವಣಸಿದ್ದಪ್ಪ, ಪರಶುರಾಮ್, ರಂಜಿತಾ, ಭಾವಸಾಬ್, ಪ್ರಕಾಶಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net