ಉದ್ಯಾನವನ, ರುದ್ರಭೂಮಿಗಾಗಿ ಸ್ಥಳ ಪರಿಶೀಲನೆ

12022021 Devadurga MLA shivanagowda Visit
Published on

ಸಾಲುಮರದ ತಿಮ್ಮಕ್ಕ ವನ ಯೋಜನೆ ಜಾರಿ | ವಿವಿಧ ಜಾಗ ವೀಕ್ಷಿಸಿದ ಶಾಸಕ ಶಿವನಗೌಡ ನಾಯಕ

ದೇವದುರ್ಗ: ಪಟ್ಟಣದಲ್ಲಿ ಸುಸಜ್ಜಿತ ಸಾರ್ವಜನಿಕ ಉದ್ಯಾನವನ, ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ವನ ಯೋಜನೆ ಹಾಗೂ ಸಾರ್ವಜನಿಕ ರುದ್ರಭೂಮಿಗೆ ಜಾಗ ಮೀಸಲಿಗಾಗಿ ಶಾಸಕ ಕೆ.ಶಿವನಗೌಡ ನಾಯಕ ಶುಕ್ರವಾರ ಬೆಳ್ಳಂಬೆಳಗ್ಗೆ ಪಟ್ಟಣದ ವಿವಿಧೆಡೆ ಸಂಚಾರ ನಡೆಸಿ, ಭೂಮಿ ಪರಿಶೀಲನೆ ನಡೆಸಿದರು.

ಪಟ್ಟಣ ಹೊರಹೊಲಯದ ಹೊಸಕೆರಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ನಂತರ ಶಂಭುಲಿಂಗೇಶ್ವರ ಬೆಟ್ಟದಲ್ಲಿರುವ ಭೂಮಿ ಪರಿಶೀಲನೆ ನಡೆಸಿದರು. ಎರಡೂ ಜಾಗದಲ್ಲಿ ಅಗತ್ಯವಿರುವ 6ಎಕರೆ ಜಾಗದ ಲಭ್ಯತೆ ಇದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.

ಪಟ್ಟಣ ಹೊರಹೊಲಯದ ನಿಜಾಮ್‌ಪೇಟೆಯಲ್ಲಿ 15 ಎಕರೆ ಭೂಮಿ ಲಭ್ಯವಿದ್ದು, ಇಲ್ಲಿ ಸಾರ್ವಜನಿಕರ ರುದ್ರಭೂಮಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕ ನಾಯಕ ಸೂಚನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಉದ್ಯಾನವದ ಅಗತ್ಯವಿದೆ. ಹೀಗಾಗಿ ಪಟ್ಟಣ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗಳನ್ನು ಪರಿಶೀಲನೆ ನಡೆಸಲಾಗಿದೆ. ಕೆಲ ಸಮುದಾಯಗಳು ರುದ್ರಭೂಮಿಗೆ ಜಾಗ ನೀಡುವಂತೆ ಮನವಿ ಮಾಡಿದ್ದವು. ಹೀಗಾಗಿ ಎಲ್ಲ ಸಮುದಾಯಗಳ ಅನುಕೂಲಕ್ಕಾಗಿ ನಿಜಾಮ್‌ಪೇಟೆ ವ್ಯಾಪ್ತಿಯಲ್ಲಿರುವ 15ಎಕರೆ ಜಾಗದಲ್ಲಿ ಎಲ್ಲ ಸಮುದಾಯ, ಜಾತಿ, ಧರ್ಮಗಳ ಜನರು ಬಳಕೆ ಮಾಡಲು ರುದ್ರಭೂಮಿ ಮಂಜೂರು ಮಾಡಿಸಲಾಗುವುದು ಎಂದರು.

ಮುಖಂಡರಾದ ಬಸವರಾಜ ಕೊಪ್ಪರ, ನಿಖಿಲ್ ಖೇಣೇದ್, ಬೂವಾಜಿ ಗೌರಂಪೇಟೆ, ಪುರಸಭೆ ಸದಸ್ಯ ಚಂದ್ರಶೇಖರ ಕುಂಬಾರ, ಲಿಂಗನಗೌಡ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net