ಪೌಷ್ಟಿಕ ಆಹಾರವೇ ಆರೋಗ್ಯದ ಗುಟ್ಟು, ಮಕ್ಕಳ ತಜ್ಞ ಡಾ.ಶಿವಕುಮಾರ ಅಭಿಮತ

060822 Devadurga Health checkup camp for malnourished children
ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಜರುಗಿತು.
Published on

ದೇವದುರ್ಗ: ಕಡಿಮೆ ತೂಕದ ಮಕ್ಕಳ ಜನನ, ಅಪೌಷ್ಟಿಕತೆ ಹಾಗೂ ಗರ್ಭಿಣಿ, ತಾಯಂದಿರ ಕಡಿಮೆ ತೂಕಕ್ಕೆ ಪೌಷ್ಟಿಕ ಆಹಾರ ಸೇವನೆಯೇ ಉತ್ತಮ ಮೆಡಿಸಿನ್ ಆಗಿದೆ. ಹೀಗಾಗಿ ತಾಯಿ ಮಗು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಮಕ್ಕಳ ತಜ್ಞ ಡಾ.ಶಿವಕುಮಾರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶನಿವಾರ ಮಾತನಾಡಿದರು. ತಾಯಿ ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಸುರಕ್ಷಿತ ಹೆರಿಗೆ, ಆರೋಗ್ಯವಂತ ಮಗು ಜನಿಸಲು ಸಾಧ್ಯವಿದೆ. ಆಹಾರ, ಸ್ವಚ್ಛತೆ ಹಾಗೂ ಜಾಗೃತಿವಹಿಸಬೇಕಿದೆ. ಪ್ರತಿತಿಂಗಳು ತಪಾಸಣೆ, ಕಡಿಮೆ ತೂಕ ಹಾಗೂ ಅಪೌಷ್ಟಿಕ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಹೇಳಿದರು.

ಶಿಬಿರದಲ್ಲಿ 38 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಕಡಿಮೆ ತೂಕ ಹೊಂದಿದ ಐದು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯ ಎಂಎನ್‌ಆರ್‌ಸಿ ಘಟಕಕ್ಕೆ ಶಿಫಾರಸು ಮಾಡಲಾಯಿತು. ಈ ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಹಿರಿಯ ಮೇಲ್ವಿಚಾರಕಿ ಗಂಗಮ್ಮ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net