ವಚನಗಳಲ್ಲಿದೆ ಕಾಯಕದ ಮಹತ್ವ; ಉಪನ್ಯಾಸಕ ನಾಗರಾಜ ಭಜಂತ್ರಿ ಅಭಿಮತ

13082022 Devadurga news
Published on

ನುಲಿ ಚಂದಯ್ಯ ಜಯಂತಿ ಆಚರಣೆ

ದೇವದುರ್ಗ: ಬಸವಾದಿ ಶರಣರ ವಚನಗಳಲ್ಲಿ ಕಾಯಕದ ಮಹತ್ವ ಸಾರಿ ಹೇಳಲಾಗಿದೆ. ಶರಣರ ಆದರ್ಶ ಜೀವನ, ಮೌಲ್ಯಗಳು ಹಾಗೂ ವಚನಗಳು ಬದುಕಿಗೆ ದಾರಿದೀಪವಾಗಿವೆ ಎಂದು ಉಪನ್ಯಾಸಕ ನಾಗರಾಜ ಭಜಂತ್ರಿ ಹೇಳಿದರು.

ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ನುಲಿ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಉಪನ್ಯಾಸ ನೀಡಿದರು. ನುಲಿ ಚಂದಯ್ಯ ಕಾಯಕ ಯೋಗಿಯಾಗಿ ಜೀವನ ನಡೆಸಿದವರು. ಇವರ ಆದರ್ಶಗಳು ಜೀವನಕ್ಕೆ ದಾರಿದೀಪವಾಗಿದೆ. ಚಂದಯ್ಯ ರಚಿಸಿದ ವಚನಗಳು ಕಾಯಕದ ಮಹತ್ವದ ಮೇಲೆ ಬೆಳಕು ಚೆಲ್ಲುತ್ತವೆ. ಸಮಾಜದ ಸತ್ಕಾರಕ್ಕಾಗಿ ನಾವುಗಳು ಶರಣರ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸುವುದು ಅಗತ್ಯ ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಮಾತನಾಡಿ, ಸಮಾಜ ಮಹನೀಯರ ಮಾರ್ಗದಲ್ಲಿ ಮುನ್ನಡೆಯಲಿ ಎಂಬುದು ಜಯಂತಿ ಆಚರಣೆಯ ಉದ್ದೇಶವಾಗಿದೆ. ಶಿಕ್ಷಣ ಅಭಿವೃದ್ಧಿಯ ಸಾಧನವಾಗಿದ್ದು, ಸಮುದಾಯದವರು ಮಕ್ಕಳಿಗೆ ಶಿಕ್ಷಣ ನೀಡಿ, ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಇಒ ಡಾ.ಆರ್.ಇಂದಿರಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಸಿದ್ದಾರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಪ್ರಮುಖರಾದ ಚನ್ನಯ್ಯ ಸ್ವಾಮಿ, ಮಂಜುನಾಥ್, ಸಿದ್ದಪ್ಪ ರೆಡ್ಡಿ, ರಾಮಣ್ಣ ಭಜಂತ್ರಿ ಮಸರಕಲ್, ರಮೇಶ್ ಭಜಂತ್ರಿ ಇತರರಿದ್ದರು.
13-ಡಿವಿಡಿ-1
ದೇವದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಉದ್ಘಾಟಿಸಿದರು. ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಬಿಇಒ ಡಾ.ಆರ್.ಇಂದಿರಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಸಿದ್ದಾರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net