ಕಣದಿಂದ ಹೊರಬಿದ್ದ ಪ್ರಜಾಕೀಯ ಪಕ್ಷದ ಅಭ್ಯರ್ಥಿ

21-DVD-3 (Hanumantra)
Published on

ದೇವದುರ್ಗ: ಸ್ಥಳೀಯ ಎಸ್ಟಿ ಮೀಸಲು ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆಯಿತು. ಆರು ಜನರ ನಾಮಿನೇಷನ್ ಸ್ವೀಕೃತಗೊಂಡಿದ್ದು, ಒಬ್ಬ ಅಭ್ಯರ್ಥಿಯ ಉಮೇದುವಾರಿಕೆ ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ಎಂ.ಎನ್.ಚೇತನ್ ಕುಮಾರ ತಿಳಿಸಿದರು.

ನಟ ಉಪೇಂದ್ರ ಸ್ಥಾಪಿತ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಹನುಮಂತ್ರಾಯ ನಾಮಪತ್ರ ತಿರಸ್ಕೃತಗೊಂಡಿದೆ. ಸೂಚಕರಾಗಿ ಒಬ್ಬರ ಹೆಸರು ಸೂಚಿಸಿದ್ದು ತಿರಸ್ಕಾರಕ್ಕೆ ಕಾರಣವಾಗಿದೆ. ಉಳಿದ 6 ಅಭ್ಯರ್ಥಿಗಳು ಸಲ್ಲಿಸಿದ್ದ 12 ನಾಮಪತ್ರಗಳು ಸಮಪರ್ಕವಾಗಿವೆ. ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ, ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ, ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ರಾಜಶೇಖರ ನಾಯಕ, ಬಹುಜನ ಸಮಾಜವಾದಿ ಪಕ್ಷದ ನರಸಣ್ಣಗೌಡ ಹೊಸಮನಿ ಹಾಗೂ ಪಕ್ಷೇತರರಾದ ರೂಪಾ ಶ್ರೀನಿವಾಸ್ ನಾಯಕ, ಆದೆಣ್ಣ ರಾಮಣ್ಣ ನಾಮಪತ್ರ ಸ್ವೀಕೃತಗೊಂಡಿವೆ. ಏ.24 ಮಧ್ಯಾಹ್ನ 3 ರೊಳಗೆ ನಾಮಪತ್ರ ಹಿಂಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net