ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಿ

Untitled design (44)
ಜಾಲಹಳ್ಳಿಯ ನಾಡ ತಹಸೀಲ್ದಾರ್ ವಿಕಾಸ್‌ಗೆ ಎಸ್‌ಎಸ್‌ಐ, ಡಿವೈಎಫ್‌ಐ ಮುಖಂಡರು ಮನವಿ ಸಲ್ಲಿಸಿದರು. ಡಿವೈಎಫ್‌ಐ ತಾಲೂಕಾಧ್ಯಕ್ಷ ರಾಜು ನಾಯಕ, ಕಾರ್ಯದರ್ಶಿ ರಿಯಾಜ್ ಆರ್ತಿ, ಪ್ರಮುಖರಾದ ಮಹಾಲಿಂಗ ದೊಡ್ಡಮನಿ, ಬಾಳಾಸಾಬ್, ಬಾಬು ಶ್ಯಾಣೇರದೊಡ್ಡಿ, ಮುಕ್ತಂ ಪಾಷಾ, ರಿಯಾಜ್ ಖುರ್ಷಿ, ಮೌನೇಶ್ ಇತರರಿದ್ದರು.
Published on

ದೇವದುರ್ಗ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಹಾಗೂ ಬೆಂಗಳೂರಿನ ರುಕ್ಸಾನಾ ಕೊಲೆ ಪ್ರಕರಣ ಖಂಡಿಸಿ ಎಸ್‌ಎಫ್‌ಐ ಹಾಗೂ ಡಿವೈಎಸ್‌ಐ ಮುಖಂಡರು ತಾಲೂಕಿನ ಜಾಲಹಳ್ಳಿಯ ನಾಡ ತಹಸಿಲ್ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕೊಲೆ ಘಟನೆಗಳು ದಿನೇ ದಿನೆ ಹೆಚ್ಚುತ್ತಿವೆ. ಮಹಿಳೆಯರಿಗೆ ಸೂಕ್ತ ಭದ್ರತೆ, ರಕ್ಷಣೆ ಇಲ್ಲದೆ ಇರುವುದು ಇಂಥ ಘಟನೆಗಳು ಮರುಕಳಿಸುತ್ತಿವೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ನೇಹಾ ಹಿರೇಮಠ ಸಹಪಾಠಿ ಚಾಕುವಿನಿಂದ ಕೊಲೆ ಮಾಡಿ ಹತ್ಯೆಗೈದಿರುವುದು ಖಂಡನೀಯ. ಎಲ್ಲ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಕಠಿಣ ಶಿಕ್ಷೆ ಜಾರಿಮಾಡದೇ ಇರುವುದು ಇಂಥ ಘಟನೆಗಳಿಗೆ ಕಾರಣ ಎಂದು ದೂರಿದರು.

ಡಿವೈಎಫ್‌ಐ ತಾಲೂಕಾಧ್ಯಕ್ಷ ರಾಜು ನಾಯಕ, ಕಾರ್ಯದರ್ಶಿ ರಿಯಾಜ್ ಆರ್ತಿ, ಮಹಾಲಿಂಗ ದೊಡ್ಡಮನಿ, ಬಾಷಾಸಾಬ್, ಬಾಬು ಶ್ಯಾಣೇರದೊಡ್ಡಿ, ಮುಕ್ತಂ ಪಾಷಾ, ರಿಯಾಜ್ ಖುರ್ಷಿ, ಮೌನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net