ಕುವೆಂಪು ಶ್ರೇಷ್ಠ ಮಾನವತವಾದಿ ಕವಿ; ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಭಿಮತ

29122021 Devadurga kuvempu jayanti
Published on

ದೇವದುರ್ಗ: ಕನ್ನಡದ ಪ್ರಥಮ ಜ್ಞಾನನಪೀಠ ಪುರಸ್ಕೃತ ಕುವೆಂಪು ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಜನರಿಗಾಗುವ ದೌರ್ಜನ್ಯ, ದಬ್ಬಾಳಿಕೆಯನ್ನು ಕುವೆಂಪು ಕವನಗಳ ಮೂಲಕ ಖಂಡಿಸುತ್ತಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.

ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಅವರ ಕೃತಿಗಳು, ಸಾಹಿತ್ಯ, ಬರವಣೆಗೆ ಹಾಗೂ ಲೇಖನಗಳು ನಾಡಿನ ಆಸ್ತಿಯಾಗಿವೆ. ಇಂದಿನ ಯುವ ಜನತೆ ಕುವೆಂಪು ಕೃತಿಗಳನ್ನು ಅಧ್ಯಯನ ಮಾಡಿ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ತಹಸೀಲ್ದಾರ್ ಶ್ರೀನಿವಾಸ್ ಚಾಪಲ್, ಕುವೆಂಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿದರು. ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ, ಪ್ರಕಾಶಗೌಡ, ಜಹೀರ್ ಪಾಷಾ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net