ಬಲದಂಡೆ ನಾಲೆಗೆ ನೀರು ಬಂದ್ ಮಾಡದಿರಿ; ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

08112022 devadurga formars appel
Published on

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆ ನೀರು ನಂಬಿಕೊಂಡು ತಾಲೂಕಿನ ರೈತರು ಸಾವಿರಾರು ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬೆಳೆದಿದ್ದಾರೆ. ಆದರೆ, ಕೆಬಿಜೆಎನ್‌ಎಲ್ ಅಧಿಕಾರಿಗಳು ಏಕಾಏಕಿ ನೀರು ಬಂದ್ ಮಾಡುತ್ತಿರುವುದು ಸರಿಯಲ್ಲ. ಮಾಹಿತಿ ನೀಡದೆ ನೀರು ಬಂದ್ ಮಾಡಬಾರದು ಎಂದು ಆಗ್ರಹಿಸಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ಕರ್ನಾಟಕ ರೈತ ಸಂಘ ಮಂಗಳವಾರ ಮನವಿ ಸಲ್ಲಿಸಿತು.

ಬಲದಂಡೆ ನಾಲೆ ವ್ಯಾಪ್ತಿಯಲ್ಲಿ ಮೊದಲ ಬೆಳೆಗೆ ಆಗಸ್ಟ್‌ನಿಂದ ಈವರೆಗೆ ನಿರಂತರ ನೀರು ಹರಿಸಿದ್ದು, ನೀರಿನ ಕೊರತೆ ನೆಪದಲ್ಲಿ ನ.9ರಿಂದ ನೀರು ಬಂದ್ ಮಾಡಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಮುಂದಾಗಿದ್ದಾರೆ. ನೀರಾವರಿ ಅಧಿಕಾರಿಗಳು ರೈತರೊಂದಿಗೆ ಚರ್ಚಿಸದೆ ನೀರು ಬಂದ್ ಮಾಡುವ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ. ಇದರಿಂದ ಬೆಳೆಗಳು ಒಣಗಲಿವೆ ಎಂದು ದೂರಿದರು.

ಅತಿಯಾದ ಮಳೆಯಿಂದ ಹಲವು ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಇದೀಗ ನಾಲೆಯಲ್ಲಿ ನೀರು ಬಂದ್ ಮಾಡಲು ಮುಂದಾಗಿರುವುದು ರೈತ ವಿರೋಧಿ ಕ್ರಮವಾಗಿದೆ. ನವೆಂಬರ್ ಕೊನೆಯ ವಾರದವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಹುಚ್ಚಪೀರ್ ಸಾಬ್ ಮಲದಕಲ್, ರವಿಕುಮಾರ ಕುಂಬಾರ ಗಬ್ಬೂರು, ರಮೇಶ ಅಬಕಾರ ಸುಂಕೇಶ್ವರಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net