ಕೌಟುಂಬಿಕ ಜಗಳದಲ್ಲಿ ಕೊಲೆ

Published on

ದೇವದುರ್ಗ: ಮುಂಡರಗಿಯಲ್ಲಿ ಕೌಟುಂಬಿಕ ಜಗಳದಲ್ಲಿ ಬುಧವಾರ ಕೊಲೆ ನಡೆದಿದೆ. ಸಾಬಣ್ಣ ನಾಯಕ ಗುಜಪರ್ (63) ಮೃತ. ಆರೋಪಿ ಶಿವರಾಜನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಾಬಣ್ಣ ನಾಯಕ ಪತ್ನಿ ಅನ್ನಪೂರ್ಣ ಹಾಗೂ ಅವರ ಸಂಬಂಧಿ ಶಿವರಾಜ ನಡುವೆ ಜಗಳವಾಗಿದೆ. ಸಾಬಣ್ಣ ಜಗಳ ಬಿಡಿಸಲು ಮುಂದಾಗಿದ್ದು, ಶಿವರಾಜ ಹೊಡೆದಿದ್ದಾನೆ. ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಸಾಬಣ್ಣನನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನ್ನಪೂರ್ಣ ನೀಡಿದ ದೂರಿನ ಮೇರೆಗೆ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ಬಿ.ನಿಖಿಲ್ ಮುಂಡರಗಿ ಗ್ರಾಮದಲ್ಲಿನ ಸಾಬಣ್ಣ ನಾಯಕ ಮನೆಗೆ ಭೇಟಿ ನೀಡಿದ್ದರು. ಸಿಪಿಐ ಸುಭಾಷ್‌ಚಂದ್ರ, ಜಾಲಹಳ್ಳಿ ಪಿಎಸ್‌ಐ ಬಸವರಾಜ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net