ಕೈಗಾರಿಕೆ ಭೂಮಿ ಒತ್ತುವರಿ ತಡೆಯಿರಿ, ಶಾಸಕಿ ಕರೆಮ್ಮ ಜಿ.ನಾಯಕಗೆ ಹೋರಾಟ ಸಮಿತಿ ಆಗ್ರಹ

KAIGARIKE
ಕೈಗಾರಿಕೆ ಭೂಮಿ ರಕ್ಷಣೆಗೆ ಒತ್ತಾಯಿಸಿ ದೇವದುರ್ಗದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ದೇವದುರ್ಗ ಕೈಗಾರಿಕೆ ಅಭಿವೃದ್ಧಿ ಹೋರಾಟ ಸಮಿತಿ ಬುಧವಾರ ಮನವಿ ಸಲ್ಲಿಸಿತು. ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಯ ಕಟ್ಟೆಮನಿ, ಸಂಚಾಲಕರಾದ ಜಿ.ಬಸವರಾಜ್ ನಾಯಕ, ಶಿವಪ್ಪ ಬಲ್ಲಿದ್, ಸಫೀಕ್ ಪಾಷಾ, ಪರಶುರಾಮ್ ಮಾಗಡಿ, ರಾಮಪ್ಪ ಪವಾಡಿ ಇತರರಿದ್ದರು.
Published on

ದೇವದುರ್ಗ: ಕೈಗಾರಿಕೆ ಅಭಿವೃದ್ಧಿಗಾಗಿ ಸರ್ಕಾರ ವಶಕ್ಕೆ ಪಡೆದಿರುವ 29.31 ಎಕರೆ ಜಮೀನನ್ನು ಉಳ್ಳವರು ಕಬಳಿಸುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಒತ್ತುವರಿ ತಡೆಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ದೇವದುರ್ಗ ಕೈಗಾರಿಕೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡರು ಬುಧವಾರ ಮನವಿ ಸಲ್ಲಿಸಿದರು.

30ವರ್ಷಗಳ ಹಿಂದೆ ತಾಲೂಕಿನಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಸರ್ಕಾರ ರೈತರ ಅಮೂಲ್ಯವಾದ 29.31 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದೆ. ಆದರೆ, ಕೈಗಾರಿಕೆ ಅಭಿವೃದ್ಧಿ ಮಾಡದೆ ಹಾಗೆಯೇ ಬಿಡಲಾಗಿದ್ದು ಇಲ್ಲಿನ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಕೆಲಸ ಸಿಗದಂತಾಗಿದೆ. ಅಲ್ಲದೆ ವಶಕ್ಕೆ ಪಡೆದ ಭೂಮಿಯನ್ನು ಕೆಲವರು ಪ್ರಭಾವ ಬಳಸಿ ಒತ್ತುವಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕೂಡಲೇ ಕೈಗಾರಿಕೆಗೆ ಮೀಸಲಿಟ್ಟ ಭೂಮಿಯನ್ನು ಅಭಿವೃದ್ಧಿಪಡಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲು ಕೈಗಾರಿಕೆ ಸ್ಥಾಪಿಸಬೇಕು. ಒತ್ತುವರಿ ಆದ ಭೂಮಿ ವಶಕ್ಕೆ ಪಡೆದು ರಕ್ಷಣೆ ನೀಡಬೇಕು. ಕೈಗಾರಿಕೆ ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಯ ಕಟ್ಟೆಮನಿ, ಸಂಚಾಲಕರಾದ ಜಿ.ಬಸವರಾಜ ನಾಯಕ, ಶಿವಪ್ಪ ಬಲ್ಲಿದ್, ಸಫೀಕ್ ಪಾಷಾ, ಪರಶುರಾಮ್ ಮಾಗಡಿ, ರಾಮಪ್ಪ ಪವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net