ಕೋರ್ಟ್ ಸಂಕೀರ್ಣ ನಿರ್ಮಾಣ ಶೀಘ್ರ; ಶಾಸಕ ಕೆ.ಶಿವನಗೌಡ ನಾಯಕ ಹೇಳಿಕೆ

09092022 Devadurga MLA visit court site
Published on

ಜಾಗದ ಸಿದ್ಧತೆ ಪರಿಶೀಲನೆ

ದೇವದುರ್ಗ: ತಾಲೂಕಿನ ವಕೀಲರ ಬಹುದಿನಗಳ ಕನಸು ನನಸಾಗುವ ಸಮಯ ಬಂದಿದ್ದು, ಸುಮಾರು 5 ಎಕರೆ ಜಾಗದಲ್ಲಿ ಶೀಘ್ರ ಸುಸಜ್ಜಿತ ತಾಲೂಕು ಸಿವಿಲ್ ಕೋರ್ಟ್ ಸಂಕೀರ್ಣ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಪಟ್ಟಣದ ಶಂಕರಬಂಡಿ ರಸ್ತೆಯಲ್ಲಿ ಸ್ಥಳದ ಸಿದ್ಧತೆ ಕಾಮಗಾರಿ ವೀಕ್ಷಿಸಿ ಶುಕ್ರವಾರ ಮಾತನಾಡಿದರು. ಕೋರ್ಟ್ ಸಂಕೀರ್ಣಕ್ಕಾಗಿ ಬಿ.ಎಸ್.ಯಡಿಯೂಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಸ್ತಾವನೆ ಸಲ್ಲಿಸಿದ್ದೆ. ಸರ್ಕಾರ 13.75 ಕೋಟಿ ರೂ. ಅನುದಾನ ನೀಡಿದೆ ಎಂದರು.

ಶಂಕರಬಂಡಿ ರಸ್ತೆಯಲ್ಲಿ 8 ಎಕರೆ ಜಾಗ ಲಭ್ಯವಿದ್ದು, ಅದನ್ನು ಸಮತಟ್ಟು ಮಾಡಲಾಗುತ್ತಿದೆ. ಅ.15ರೊಳಗೆ ಸಮತಟ್ಟು ಕೆಲಸ ಪೂರ್ಣಗೊಳಿಸಿ, ಕಂದಾಯ ಸಚಿವ ಆರ್.ಅಶೋಕ ಹಾಗೂ ಕಾನೂನು ಸಚಿವ ಎ.ಮಾಧುಸ್ವಾಮಿಯಿಂದ ಕೋರ್ಟ್ ಸಂಕೀರ್ಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. 5 ಎಕರೆ ಜಾಗದಲ್ಲಿ ಕೋರ್ಟ್ ಸಂಕೀರ್ಣ ನಿರ್ಮಾಣವಾಗಲಿದ್ದು, 2 ಕೋರ್ಟ್ ಹಾಲ್, ಸಂವಾದ ಭವನ, ನ್ಯಾಯಾಧೀಶರಿಗೆ ಪ್ರತ್ಯೇಕ ಕೊಠಡಿ, ವಕೀಲರ ಭವನ, ಸಂಘದ ಕಚೇರಿ, ಫಂಕ್ಷನ್ ಹಾಲ್, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಶಿವನಗೌಡ ನಾಯಕ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net