ಕೊಟ್ಟ ಮಾತಿನಂತೆ ನಡೆದರೆ ಮಹತ್ವ ಜಾಸ್ತಿ; ಶಾಸಕ ಡಾ.ಶಿವರಾಜ ಪಾಟೀಲ್ ಅನಿಸಿಕೆ

22082021 Raichur MLA Shivaraj Patil Raksha Bhandhan
Published on

ರಾಯಚೂರು: ರಕ್ಷಾ ಬಂಧನದ ದಿನ ಸಹೋದರ-ಸಹೋದರಿಯರು ಕೊಟ್ಟ ಮಾತಿನಂತೆ ನಡೆದುಕೊಂಡಾಗ ಮಾತ್ರ ಹಬ್ಬದ ಮಹತ್ವ ಸಾರಲು ಸಾಧ್ಯ ಎಂದು ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆ ದಿನನಿತ್ಯವೂ ಹಲವು ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ನೀಡುವುದರ ಮೂಲಕ ಈ ಭಾಗದ ಜನರಲ್ಲಿ ಆಧ್ಯಾತ್ಮಿಕ ಮನೋಭಾವನೆ ಬಿತ್ತರಿಸುತ್ತಿರುವುದು ಶ್ಲಾಘನೀಯ. ಸ್ಮಿತಾ ಅಕ್ಕನವರು ಹಮ್ಮಿಕೊಳ್ಳುವ ಯಾವುದೇ ಕಾರ್ಯಮಕ್ಕೆ ಸಹಾಯ, ಸಹಕಾರ ನೀಡಲಾಗುವುದು ಎಂದರು.

ದಿವ್ಯಸಾನ್ನಿಧ್ಯ ವಹಿಸಿದ್ದ ಸ್ಮಿತಾ ರಾಜಯೋಗಿನಿ ಅಕ್ಕ ಮಾತನಾಡಿ, ಪ್ರತಿಯೊಬ್ಬರೂ ಸಮಾಜದಲ್ಲಿ ಉಲ್ಲಾಸದಿಂದ ಈ ಲೋಕದಲ್ಲಿ ಬದುಕಿ ಬಾಳಬೇಕು. ನಮ್ಮ ಮಾತುಗಳು ಇನ್ನೊಬ್ಬರನ್ನು ಸಂತೋಷದ ಕಡೆಗೆ ಕೊಂಡೊಯ್ಯಬೇಕು ಎಂದರು.

ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ಮಾತನಾಡಿದರು. ವಕೀಲ ದೇವಣ್ಣ ನಾಯಕ್, ಕಡಗೋಲ ಆಂಜನೇಯ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಸಮಿತಿ ನಿರ್ದೇಶಕ ವಿಜಯಕುಮಾರ್ ಪಾಟೀಲ್, ದಂಡಪ್ಪ ಬಿರಾದಾರ್ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net