ತಾಯಿಹಾಲು ಅಮೃತಕ್ಕೆ ಸಮಾನ, ವೈದ್ಯಾಧಿಕಾರಿ ಮಹಾದೇವ ಹೊಸಮನಿ ಅನಿಸಿಕೆ

STANYAPANA
ದೇವದುರ್ಗ ತಾಲೂಕು ಮಲದಕಲ್‌ನಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಮಹಾದೇವ ಹೊಸಮನಿ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಮಂಜುಳಾ ಶುಕ್ಲಾ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಈರಣ್ಣ, ಸಮುದಾಯ ಆರೋಗ್ಯ ಅಧಿಕಾರಿ ಜಾಫರ್, ಅಂಗನವಾಡಿ ಕಾರ್ಯಕರ್ತೆರಾದ ಮಹಾದೇವಮ್ಮ, ಹನುಮಂತಿ, ಪದ್ಮಾವತಿ, ಅನುಸೂಯ ಇದ್ದರು.
Published on

ದೇವದುರ್ಗ: ರೋಗ ನಿರೋಧಕ ಶಕ್ತಿಹೊಂದಿರುವ ತಾಯಿಹಾಲು ಅಮೃತಕ್ಕೆ ಸಮಾನ ಎಂದು ವೈದ್ಯಾಧಿಕಾರಿ ಮಹಾದೇವ ಹೊಸಮನಿ ಹೇಳಿದರು.

ತಾಲೂಕಿನ ಮಲದಕಲ್ ಪ್ರಾಥಮಿಕ ಆರೋಗ್ಯ ಉಪಕೆಂದ್ರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ತಾಯಿಹಾಲಿನಲ್ಲಿರುವ ಕೊಲೆಸ್ಟ್ರಾಲ್ ಮಗುವಿನಲ್ಲಿ ಕಂಡುಬರುವ ಅಪೌಷ್ಟಿಕತೆ, ನಿಮೋನಿಯ, ಅತಿಸಾರ ಭೇದಿ ಇನ್ನಿತರ ಮಾರಣಾಂತಿಕ ಖಾಯಿಲೆಯಿಂದ ಕಾಪಾಡುತ್ತದೆ. ತಾಯಿಗೂ ಕೂಡ ಸ್ತನ ಕ್ಯಾನ್ಸರ್, ಅಧಿಕ ರಕ್ತ ಸ್ರಾವ, ಬೇಗ ಗರ್ಭಧರಿಸುವಿಕೆ ತಡೆಗೆ ಸಹಕಾರಿಯಾಗಿದೆ ಎಂದರು.

ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಮಂಜುಳಾ ಶುಕ್ಲಾ ಮಾತನಾಡಿ, ಆ.7ರಿಂದ 12ರವರೆಗೆ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಮೊದಲ ತಿಂಗಳಿನಿಂದ 5ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಲಾಗುವುದು. ಇದಕ್ಕೆ ಗ್ರಾಮಸ್ಥರು, ಜನರ ಸಹಕಾರ ಮುಖ್ಯ ಎಂದರು.

ಆರೋಗ್ಯ ನಿರೀಕ್ಷಣಾ ಅಧಿಕಾರಿ ಈರಣ್ಣ, ಸಮುದಾಯ ಆರೋಗ್ಯ ಅಧಿಕಾರಿ ಜಾಫರ್, ಅಂಗನವಾಡಿ ಕಾರ್ಯಕರ್ತೆರಾದ ಮಹಾದೇವಮ್ಮ, ಹನುಮಂತಿ, ಪದ್ಮಾವತಿ, ಅನುಸೂಯ, ಆಶಾ ಕಾರ್ಯಕರ್ತೆಯರಾದ ಹಾಜಮ್ಮ, ಮಲ್ಲಮ್ಮ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net