ಕೈಕಟ್ಟಿ ಕುಳಿತರೆ ಸಾಧನೆ ಆಗದು; ಕನ್ನೂರು ಸಿದ್ದಲಿಂಗೇಶ್ವರ ಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ ಅನಿಸಿಕೆ

12032021 Devadurga modalkar punyaradhane
Published on

ದೇವದುರ್ಗ: ಕೈಕಟ್ಟಿ ಕುಳಿತರೆ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿಯಿದ್ದರೆ ಯಾವ ಕೆಲಸವನ್ನಾದರೂ ಮಾಡಬಹುದು ಎಂದು ಕನ್ನೂರು ಸಿದ್ದಲಿಂಗೇಶ್ವರ ಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಮಲದಕಲ್ ಗ್ರಾಮದ ಶ್ರೀ ನಿಜಾನಂದ ಯೋಗಾಶ್ರಮದಲ್ಲಿ ಶುಕ್ರವಾರ ಜರುಗಿದ ನಿಜಾನಂದ ಶಿವಯೋಗಿಗಳ 6ನೇ ವರ್ಷದ ಪುಣ್ಯಸ್ಮರಣೆ ಮತ್ತು ಮಹಾಶಿವರಾತ್ರಿ ಜಾಗರಣೆ ನಿಮಿತ್ತ ಅಖಂಡ ಶಿವನಾಮ ಸ್ಮರಣೆ ಸಪ್ತಭಜನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಯೋಗಾಶ್ರಮದ ಶ್ರೀ ಗುರುಬಸವ ರಾಜಗುರು ಮಾತನಾಡಿ, ಮನುಷ್ಯ ಉಸಿರು ಇರುವತನಕ ಗುರುವಿನಲ್ಲಿ ನಿಷ್ಠೆ, ಒಳ್ಳೆಯ ಸತ್ಕಾರ್ಯ, ಕೆಲಸ ಮಾಡಬೇಕು. ಸದಾ ಶಿವನಾಮ ಸ್ಮರಣೆಯಲ್ಲಿ ಮಾಡುವ ಮೂಲಕ ಗುರುವಿನ ಕೃಪೆಗೆ ಒಳಗಾಗಬೇಕು ಎಂದರು.

ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮಟಮಾರಿಯ ಶ್ರೀ ಜ್ಞಾನಾನಂದ ಸ್ವಾಮೀಜಿ, ಕಲ್ಲೂರು ಶಂಕರಚಾರ್ಯ ಮಠದ ಶ್ರೀ ಶಿವರಾಮನಂದ ಸ್ವಾಮೀಜಿ, ಕಲ್ಲೂರು ಶ್ರೀ ಅಡವೀಶ್ವರ ಶಿವಯೋಗಿಗಳ ಮಠದ ಶ್ರೀ ಶಂಭುಲಿಂಗ ಸ್ವಾಮೀಜಿ, ನೀರಮಾನ್ವಿಯ ಅಭಿನವ ನಿಜಗುಣರು, ಹನುಮಂತ್ರಾಯ ಗುರು ಕಾಕರಗಲ್ ಸಾನ್ನಿಧ್ಯ ವಹಿಸಿದ್ದರು. ವಿವಿಧ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net