ಮಹಾವೀರರ ಆದರ್ಶ ಅನುಸರಿಸಿ-ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್

Bhagavan Mahaveera jayanti
ದೇವದುರ್ಗ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಶಿರಸ್ತೇದಾರ್ ಗೋವಿಂದ ನಾಯಕ್, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಅನಿಲ್ ಕುಮಾರ್, ರವಿಕುಮಾರ್, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ ಇತರರಿದ್ದರು.
Published on

ದೇವದುರ್ಗ: ಶರಣರು, ದಾರ್ಶನಿಕರು, ಸಾಧು-ಸಂತರು ಈ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಜೀವನವೇ ನಮಗೆ ಮಾರ್ಗದರ್ಶನ. ವರ್ಧಮಾನ ಮಹಾವೀರ ಆದರ್ಶಗಳನ್ನು ಅನುರಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಹೇಳಿದರು.

ಭಾವಚಿತ್ರಕ್ಕೆ ಮಾಲಾರ್ಪಣೆ

ತಾಲೂಕು ಆಡಳಿತ ಸೌಧದಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಂಗಳವಾರ ಮಾತನಾಡಿದರು. ಗೌತಮ ಬುದ್ಧ, ಭಗವಾನ್ ಮಹಾವೀರ, ಬಸವೇಶ್ವರರು ಸೇರಿ ಅನೇಕ ಮಹನೀಯರು ದೇಶದಲ್ಲಿ ತಮ್ಮದೆಯಾದ ತತ್ವ ಆದರ್ಶಗಳನ್ನು ನಾಡಿಗೆ ನೀಡಿದ್ದಾರೆ. ಇವರು ನೀಡಿದ ಕೊಡುಗೆ ದೇಶಕ್ಕೆ ಮಾತ್ರವಲ್ಲ, ಜಗತ್ತಿಗೆ ಮಾದರಿಯಾಗಿವೆ ಎಂದು ಹೇಳಿದರು. ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ ಮಾತನಾಡಿದರು.

ಶಿರಸ್ತೇದಾರ್ ಗೋವಿಂದ ನಾಯಕ್, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಅನಿಲ್ ಕುಮಾರ್, ರವಿಕುಮಾರ್, ಸಂಘ ಸಂಸ್ಥೆಗಳ ಮುಖಂಡರಾದ ಇಕ್ಬಾಲ್ ಸಾಬ್, ಹನುಮಯ್ಯ, ದಂಡಪ್ಪ, ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net