ಜಂಪ್‌ರೋಪ್ ಕ್ರೀಡೆಯಲ್ಲಿ ಬೆಳ್ಳಿ ಪದಕ

Devadurga Jumprope Competition
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಂಪ್‌ರೋಪ್ ಸ್ಪರ್ಧೆಯಲ್ಲಿ ಪಡೆದ ಬೆಳ್ಳಿ ಪದಕದೊಂದಿಗೆ ಮಹಾರಾಜ್ ಕಟ್ಟಿಮನಿ.
Published on

ದೇವದುರ್ಗ: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಜಂಪ್‌ರೋಪ್ ಸ್ಪರ್ಧೆಯಲ್ಲಿ ಪಟ್ಟಣದ ಶ್ರೀ ಖೇಣೇದ್ ಮುರಿಗೆಪ್ಪ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮಹಾರಾಜ್ ಕಟ್ಟಿಮನಿ ಬೆಳ್ಳಿ ಪದಕ ಪಡೆದಿದ್ದಾನೆ.

21ನೇ ಸಬ್ ಜೂನಿಯರ್ ಜಂಪ್‌ರೋಪ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಡಬಲ್ ಟಚ್ ಸ್ಪೀಡ್ ಪ್ರಿಂಟ್ ವಿಭಾಗದಲ್ಲಿ ಮಹಾರಾಜ್ ದ್ವಿತೀಯ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಕಾಲೇಜಿನ ಪ್ರಾಚಾರ್ಯ ಸಿದ್ದಲಿಂಗಯ್ಯ ಸ್ವಾಮಿ ತಿಳಿಸಿದ್ದಾರೆ. ವಿದ್ಯಾರ್ಥಿ ಸಾಧನೆಗೆ ಖೇಣೇದ್ ಸಂಸ್ಥೆ ಅಧ್ಯಕ್ಷ ಪ್ರಕಾಶ ಖೇಣೇದ್, ಸಂಯೋಜಕ ಬಸವರಾಜ್ ಯಾಟಗಲ್, ಸಿದ್ದಲಿಂಗೆಶ್ವರ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net