ಬಲಿಷ್ಠ ಭಾರತಕ್ಕಾಗಿ ಮತದಾನ ಮಾಡಿ

Untitled design (49)
ದೇವದುರ್ಗದಲ್ಲಿ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಸೇವಾ ಸಂಘದಿಂದ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಲೂಕು ಮಟ್ಟದ ಅಧಿಕಾರಿಗಳಾದ ಬಕಪ್ಪ ಹೊಸಮನಿ, ಶರಣಬಸಪ್ಪ, ಮಾನಪ್ಪ ಬಡಿಗೇರ್, ರಾಜಕುಮಾರ್, ಮಂಜುಳಾ ಅಸುಂಡಿ, ಸೇವಾ ಸಂಘದ ತಾಲೂಕು ಅಧ್ಯಕ್ಷ ತಿಮ್ಮಪ್ಪ ಬಲ್ಲಿದವ್, ಗೌರವಾಧ್ಯಕ್ಷ ಶಿವಪ್ಪ ಬಲಿದವ್ ಇದ್ದರು.
Published on

ದೇವದುರ್ಗ: ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.

ಪಟ್ಟಣದ ನಗರಗುಂಡ ಕ್ರಾಸ್‌ಬಳಿ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಸೇವಾ ಸಂಘ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಸಂವಿಧಾನ ಮತದಾನ ಮಾಡುವ ಹಕ್ಕು ನೀಡಿದೆ. ಮತದಾನ ಅಮೂಲ್ಯವಾದ ಕರ್ತವ್ಯವಾಗಿದ್ದು, ಯಾರು ಕೂಡ ವಂಚಿತರಾಗಬಾರದು ಎಂದರು.

ತಾಲೂಕು ಮಟ್ಟದ ಅಧಿಕಾರಿಗಳಾದ ಬಕಪ್ಪ ಹೊಸಮನಿ, ಶರಣಬಸಪ್ಪ, ಮಾನಪ್ಪ ಬಡಿಗೇರ್, ರಾಜಕುಮಾರ್, ಮಂಜುಳಾ ಅಸುಂಡಿ, ಸೇವಾ ಸಂಘದ ತಾಲೂಕು ಅಧ್ಯಕ್ಷ ತಿಮ್ಮಪ್ಪ ಬಲ್ಲಿದವ್, ಗೌರವಾಧ್ಯಕ್ಷ ಶಿವಪ್ಪ ಬಲಿದವ್, ಪ್ರಮುಖರಾದ ಮೈಹಬೂಬ್, ರಂಗಪ್ಪ ಕೋತಿಗುಡ್ಡ, ಹನುಮಂತಪ್ಪ ಮನ್ನಾಪುರ, ಶಿವರಾಜ್ ರುದ್ರಾಕ್ಷಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net