ಮುದಗೋಟ್‌ನಲ್ಲಿ ಉದ್ಯೋಗ ಖಾತ್ರಿ ಕೆಲಸ ಆರಂಭ, ಕೂಲಿಕಾರ್ಮಿಕರಿಗೆ ಮುಂಜಾಗ್ರತೆ ಕ್ರಮ

22042020 Devadurga NAREGA work
Published on

ದೇವದುರ್ಗ : ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಸರ್ಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನ ಕರಡಿಗುಡ್ಡ ಗ್ರಾಪಂ ವ್ಯಾಪ್ತಿಯ ಮುದಗೋಟ್‌ನಲ್ಲಿ ಖಾತ್ರಿ ಕಾಮಗಾರಿ ಸೋಮವಾರ ಆರಂಭಿಸಲಾಗಿದೆ.

ಕರೊನಾ ತಡೆಗೆ ಮುಂಜಾಗ್ರತೆ ಕ್ರಮಕೈಗೊಂಡ ಗ್ರಾಪಂ ಆಡಳಿತ ಮಂಡಳಿ ಕೂಲಿಕಾರರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದೆ. ಅವರಿಗೆ ನೆರಳಿನ ವ್ಯವಸ್ಥೆ, ಶುದ್ಧ ಕುಡಿವ ನೀರು ಹಾಗೂ ಒಬ್ಬರು ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಿ ಕ್ರಮಕೈಗೊಂಡಿದೆ.

ಮುದಗೋಟ್‌ನಲ್ಲಿ ಎರಡು ತಂಡ ರಚನೆ ಮಾಡಿ ತಲಾ 10 ಜನರಂತೆ 20 ಕೂಲಿಕಾರರಿಗೆ ಕೆಲಸ ನೀಡಲಾಗಿದ್ದು, ಉಳಿದ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಸುರಕ್ಷತೆ ಕ್ರಮದೊಂದಿಗೆ ಖಾತ್ರಿ ಕಾಮಗಾರಿ ಆರಂಭಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಬಾಲಪ್ಪ ನಿಲುವಂಜಿ ತಿಳಿಸಿದ್ದಾರೆ. ಪಿಡಿಒ ಶೇಖರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net