ಕಣ್ಮನ ಸೆಳೆದ ಕಡುಬಿನ ಕಾಳಗ ಉತ್ಸವ

01022023 devadurga kadabina kalaga
Published on

ದೇವದುರ್ಗ: ಗಬ್ಬೂರು, ಬೂದಿಬಸವೇಶ್ವರರು ನಡೆದಾಡಿದ ಪುಣ್ಯಭೂಮಿಯಾಗಿದ್ದು, ಭಕ್ತರ ಮೇಲೆ ಬೂದಿಬಸವರ ಶ್ರೀರಕ್ಷೆಯಿದೆ. ಹೀಗಾಗಿ ಈ ಪ್ರದೇಶ ಕಾಲಕಾಲಕ್ಕೆ ಮಳೆ, ಬೆಳೆ ಕಂಡು ಸಮೃದ್ಧಿಯಾಗಿದೆ ಎಂದು ಗಬ್ಬೂರು ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗಬ್ಬೂರು ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಕಡುಬಿನ ಕಾಳಗ ಉತ್ಸವದಲ್ಲಿ ಬುಧವಾರ ಮಾತನಾಡಿದರು. ಭಕ್ತರು ಕಾಯಕ, ಸೇವೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ಕಂಡುಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕು ಎಂದರು.

ನವಲಕಲ್ ಬೃಹನ್ಮಠದ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೂದಿಬಸವೇಶ್ವರರು ಭಕ್ತರ ಪಾಲಿನ ಕಾಮಧೇನು, ಕಲ್ಪವೃಕ್ಷವಾಗಿದ್ದರೆ, ಶ್ರೀಮಠ ಬೇಡಿದ ವರವ ಕೊಡುವ ಆಶ್ರಮವಾಗಿದೆ. ಭಕ್ತರ ದೇಣಿಗೆಯನ್ನೇ ಸಮಾಜಸೇವೆಯ ಮೂಲಕ ಸಮಾಜಕ್ಕೆ ಮಠ ಅರ್ಪಿಸುತ್ತಿದೆ ಎಂದು ಹೇಳಿದರು. ಸುಲ್ತಾನಪುರ ಬೃಹನ್ಮಠದ ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಚನ್ನಬಸಯ್ಯಸ್ವಾಮಿ, ಬೂದಿಬಸವ ತಾತ, ಸದಾಶಿವಯ್ಯಸ್ವಾಮಿ, ಬೂದಯ್ಯಸ್ವಾಮಿ ಇಂಗಳದಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net