ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ ಅದ್ದೂರಿ

Untitled design (55)
ದೇವದುರ್ಗ ತಾಲೂಕು ಜಾಲಹಳ್ಳಿಯ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ ಜರುಗಿತು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ ಆರಾಧ್ಯ ದೈವ ಲಕ್ಷ್ಮೀರಂಗನಾಥ ಸ್ವಾಮಿ ಜಾತ್ರೆಯ ಅಂಗವಾಗಿ ಮಹಾರಥೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಒಂದುವಾರದಿಂದ ದೇವಸ್ಥಾನದಲ್ಲಿ ನಿರಂತರವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಕೈಗೊಳ್ಳಲಾಗಿತ್ತು. ಮಂಗಳವಾರ ಬೆಳಗ್ಗೆಯಿಂದ ಭಕ್ತರು ದೇವಸ್ಥಾನದಲ್ಲಿ ವಿವಿಧ ರೀತಿಯ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದುಕೊಂಡರು. ಹರಿಕೆ ಮಾಡಿಕೊಂಡ ಕೆಲವರು ಜ್ಯೋತಿ ಹೊತ್ತು ಅರ್ಪಿಸಿದರು. ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಮೆರೆದರು.

ದೇವಸ್ಥಾನದ ಅವರಣದಲ್ಲಿ ನೀರಿನ ಆಟಕ್ಕೆ ಮಹಿಳೆಯರು ಸಾಥ್ ನೀಡಿದ್ದು, ನೀರು ಹೊತ್ತು ತಂದು ಹಾಕಿದರು. ಸಂಜೆ 4ರಿಂದ ರಥಕ್ಕೆ ದೊಡ್ಡ ಪ್ರಮಾಣದ ಮುತ್ತಿನ ಹಾರ, ಬಣ್ಣ, ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿ 8:30ಕ್ಕೆ ದೇವರ ಮನೆಯವರಿಂದ ರಸಬುತ್ತಿ ತಂದು ರಥಕ್ಕೆ ಐದು ಸುತ್ತು ಹಾಕಿ ನೈವೇದ್ಯ ಹಾಗೂ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೊರೆಗಳು, ದೇಸಾಯಿ, ಕುಲಕರ್ಣಿ, ಮಾಲಿಗೌಡ್ರು, ಪೊಲೀಸ್ ಪಾಟೀಲ್ ಐದು ಮನೆತನದ ಮುಖ್ಯಸ್ಥರು ಮುಂದೆ ನಿಂತು ರಥೋತ್ಸವ ಜರುಗುವಂತೆ ಅಪ್ಪಣೆ ನೀಡಿದರು. ಸುತ್ತಮುತ್ತಲ್ಲಿನ ಗ್ರಾಮಗಳಿಂದ ಭಕ್ತರು ಸಾವಿರಾರೂ ಸಂಖ್ಯೆಯಲ್ಲಿ ಸೇರಿದ್ದರು. ಮಹಾರಥೋತ್ಸವಕ್ಕೆ ಬಾಳೆಹಣ್ಣು, ಉತ್ತುತ್ತಿ, ಹೂವು ಎಸೆದು ಭಕ್ತಿ ಸಮರ್ಪಿಸಿದರು.ಮುಖಂಡರಾದ ವೀರಣ್ಣ ಪಾಣಿ, ಸಿದ್ದಪ್ಪ ನಾಯಕ ಗುಮೇದಾರ, ಚಂದ್ರಕಾಂತ ಚಿಕ್ಕಲ್, ಯಾಸೀನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net