ಜಾಲಹಳ್ಳಿ ಕನ್ಯಾಪ್ರೌಢ ಶಾಲೆಯಲ್ಲಿ ಅಡುಗೆ ಕೋಣೆಗೆ ಬೆಂಕಿ, ಧಾನ್ಯ ಭಸ್ಮ

13032021 Devadurga School fire
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಸ್ಟೋರ್‌ರೂಮ್‌ಗೆ ಶುಕ್ರವಾರ ತಡರಾತ್ರಿ ಬೆಂಕಿ ಅಕಸ್ಮಿಕವಾಗಿ ಬಿದ್ದು, ಅಪಾರ ಪ್ರಮಾಣದ ಧಾನ್ಯಗಳು ಸುಟ್ಟಿವೆ.

18 ಸಾವಿರ ರೂ. ಮೌಲ್ಯದ 30 ಪ್ಯಾಕಿಟ್‌ನ ಅಕ್ಕಿ, 30 ಸಾವಿರ ರೂ. ಮೌಲ್ಯದ ವಿವಿಧ ಪಠ್ಯಪುಸ್ತಕಗಳು, 35 ಸಾವಿರ ರೂ., ಮೌಲ್ಯದ ಸೈಕಲ್ ಸುಟ್ಟಿವೆ. ಮಕ್ಕಳ ಪಠ್ಯಪುಸ್ತಕಗಳು ಸುಟ್ಟಿರುವುದು ಶಿಕ್ಷಕರು ಹಾಗೂ ಪಾಲಕರ ಆತಂಕ್ಕೆ ಕಾರಣವಾಗಿದೆ. ಈ ಕುರಿತು ಅಗ್ನಿ ಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರಿಂದ ಶವ ಮೆರವಣಿಗೆ ಮಾಡುವಾಗ ಸಿಡಿಸಿದ ಪಟಾಕಿ ಕಿಡಿ ಶಾಲೆ ಸ್ಟೋರ್‌ರೂಮ್‌ಗೆ ಸಿಡಿದಿದೆ. ಇದರಿಂದ ಕಿಡಿಹೊತ್ತಿಕೊಂಡು ಬೆಂಕಿಹತ್ತಿಕೊಂಡಿದೆ ಎಂದು ಪ್ರಕರಣದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net