ದೇವದುರ್ಗ ತಾಲೂಕಿನಲ್ಲಿ ಮನೆಗಳು ಕುಸಿತ

28-DVD-4
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ದೇವದುರ್ಗ: ನಿರಂತವಾಗಿ ಸುರಿಯುತ್ತಿರುವ ಪುಷ್ಯ ಮಳೆಯಿಂದ ಪಟ್ಟಣದಲ್ಲಿ ಎರಡು ಮನೆಗಳು ಗುರುವಾರ ಸಂಜೆ ಕುಸಿದಿವೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 52 ಮನೆಗಳಿಗೆ ಹಾನಿಯಾಗಿದೆ.

ಇಂದಿರಾ ನಗರದಲ್ಲಿ ಶಿವಮ್ಮ ಎಂಬುವವರ ಮಣ್ಣಿನ ಮನೆ ಸಂಪೂರ್ಣ ಕುಸಿದಿದೆ. ಸಾಬಣ್ಣ ಎಂಬುವವರ ಮನೆ ಜಖಂಗೊಂಡಿದೆ. ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆ, ಮುಖ್ಯಾಧಿಕಾರಿ ಹಂಪಯ್ಯ ಬೊಮ್ಮನಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀಲವಂಜಿ ಗ್ರಾಮದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಜಾಲಹಳ್ಳಿ, ಮುಕನಾಳ ಹಾಗೂ ಇತರೆಡೆ ಸುಮಾರು ಐದು ಮನೆಗಳು ಭಾಗಶಃ ಹಾಗೂ 46 ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ. ಒಂದು ಮನೆಯ ಶೆಡ್ ಹಾನಿಗೊಳಗಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಿಯಾದ ಮನೆಗಳ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ತಿಳಿಸಿದ್ದಾರೆ.

ತಾಲೂಕಿನಲ್ಲಿ ಒಂದು ವಾರದಿಂದ ಸುರಿಯುತ್ತಿದ್ದ ತುಂತುರು ಮಳೆ ಗುರುವಾರ ಸಂಜೆ ಬಿಡುವು ನೀಡಿತ್ತು. ಶುಕ್ರವಾರ ಮಧ್ಯಾಹ್ನ ಮಳೆ ಆರಂಭವಾಗಿ ಪಟ್ಟಣದಲ್ಲಿ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ಸಮಸ್ಯೆಯಾಯಿತು. ಬಸ್ ನಿಲ್ದಾಣದ ಬಹುತೇಕ ಭಾಗ ಕೆಸರು ಮಯವಾಗಿದ್ದು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಯಿತು. ಪಟ್ಟಣದ ವಿವಿಧ ಬಡಾವಣೆಯಲ್ಲಿ ನೀರು ನಿಂತಿದ್ದು ಜನರಿಗೆ ತೊಂದರೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net